

ಕಾಸರಗೋಡು: ಕರಿವೆಳ್ಳೂರು ಕೊಡಕ್ಕಾಡಿನ ಓಲಾಟ್ ನಿವಾಸಿ ಎಂ.ವಿಜೇಶ್(35) ಎಂಬುವವರ ಮೃತದೇಹ ಕುಂಬಳೆ ಸೂರಂಬೈಲಿನ ಪತ್ನಿ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾರದ ಹಿಂದೆ ವಿಜೇಶ್ ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಸೂರಂಬೈಲಿನಲ್ಲಿರುವ ಪತ್ನಿ ಮನೆಗೆ ಆಗಮಿಸಿದ್ದರು. ಶುಕ್ರವಾರ ಮಧ್ಯಾಹ್ನ ಸ್ನಾನಕ್ಕೆ ತೆರಳಿದವರು ಬಹಳ ಹೊತ್ತಿನವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ನೇಣು ಬಿಗಿದಿರುವುದು ಕಂಡುಬಂದಿತ್ತು. ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.