

ಚಿಕ್ಕಬಳ್ಳಾಪುರ: ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಹೆಂಡತಿಯನ್ನು ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಗುಡಿಬಂಡೆ ಪಟ್ಟಣ 8ನೇ ವಾರ್ಡ್ ನ ಮನೆಯಲ್ಲಿ ಕೊಲೆಯಾದ ಮಹಿಳೆಯನ್ನು ರಮಿಜಾಬಿ (35). ಆರೋಪಿ ಬಾಬಾಜಾನ್. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು ಗುಡಿಬಂಡೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಪ್ರಕರಣದ ಹಿನ್ನೆಲೆ*
ಮೃತ ರಾಮಿಜಾಬಿ ಗುಡಿಬಂಡೆ ಪಟ್ಟಣದಲ್ಲಿ ಕಳೆದ 3 ವರ್ಷಗಳಿಂದ ಎರಡನೇ ಗಂಡನಾದ ಬಾಬಾ ಜಾನ್ ರೊಂದಿಗೆ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ಸುಮಾರು 4 ಗಂಟೆ ಸಮಯದಲ್ಲಿ ಗಂಡ ಹೆಂಡತಿ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನು ಗಂಡ ಭೀಕರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಬಾಬಾಜಾನ್ ರನ್ನು ಬಂಧಿಸಿದ್ದಾರೆ.
ಮೃತ ದುರ್ದೈದೈವಿ ರಮಿಜಾಬಿ ಮೂಲತಃ ಶ್ರೀನಿವಾಸಪುರ ಗ್ರಾಮದವಳಾಗಿದ್ದು, ಮೊದಲು ಮುಳಬಾಗಿಲು ತಾಲೂಕಿನ ಅಲ್ಲಾಬಕಾಶ್ ಎಂಬಾತನೊಂದಿಗೆ ಮದುವೆಯಾಗಿದ್ದು, ನಂತರ ಆತನನ್ನು ಬಿಟ್ಟು ಬಾಬಾಜಾನ್ ರೊಂದಿಗೆ ಎರಡನೇ ಮದುವೆಯಾಗಿ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದಳು. ಆಗಾಗ್ಗೆ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಕೊನೆಗೆ ಗಂಡ ಹೆಂಡತಿ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.