

ಚನ್ನಪಟ್ಟಣ
ನಡು ರಸ್ತೆಯಲ್ಲೇ ಪತ್ನಿ ಮೇಲೆ ಪತಿಯೊರ್ವ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನೀಲಸಂದ್ರ ಗ್ರಾಮದಲ್ಲಿ ನಡೆದಿದೆ. ಪತಿ ಹಾಗೂ ಪತ್ನಿಯರ ಬೀದಿ ರಂಪಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.
ತಾಲೂಕಿನ ಮೊಳೆದೊಡ್ಡಿ ಗ್ರಾಮದ
ಸುಮಾ (28) ಪತಿ ಹರೀಶ್ ನಿಂದ ಹಲ್ಲೆಗೊಳಗಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ತನ್ನ ಗಂಡನ ವಿರುದ್ಧ ಸುಮಾ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನದ ಆರೋಪಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕಳೆದ ಐದು ವರ್ಷದ ಹಿಂದೆ ಒಂದೇ ಗ್ರಾಮದವರಾದ ಸುಮ ಮತ್ತು ಹರೀಶ್ ಮದುವೆಯಾಗಿದ್ದರು. ಆದರೆ,
ಮದುವೆಯಾದ 3 ತಿಂಗಳಿಗೆ ಇಬ್ಬರ ನಡುವೆ ವೈಮನಸ್ಯು ಮೂಡಿ ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಸುಮಾ, ಇತ್ತೀಚೆಗೆ ಊರಿಗೆ ಬಂದು ತನ್ನ ಸ್ನೇಹಿತನ ಜೊತೆ ಸೇರಿ ನಿರಾಶ್ರಿತರ ಆಶ್ರಮ ತೆರೆದಿದ್ದಳು. ಇದೀಗ, ಸುಮ ಹಾಗೂ ಸ್ನೇಹಿತ ವೆಂಕಟಪ್ಪ ಇಬ್ಬರ ಮೇಲೆ ಕೂಡ ಕೊಲೆ ಯತ್ನ ನಡೆಸಿದ್ದಾನೆ ಎನ್ನಲಾಗಿದೆ. ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗುವ ವೀಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಸಂಬಂಧ
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.