ಹೊಳಲ್ಕೆರೆಯಲ್ಲೂ ಒಗ್ಗೂಡಿದ ಗಂಡ-ಹೆಂಡತಿ

HLK COURT 09
Published on

ಹೊಳಲ್ಕೆರೆ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕಾ ಆದಾಲತ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಕುಟುಂಬಗಳು ಒಗ್ಗೂಡಿದವು.

ಹಿರಿಯ ಸಿವಿಲ್ ನ್ಯಾಯಲಯಕ್ಕೆ ಸಲ್ಲಿಸಿದ್ದ ತಾಳಿಕಟ್ಟಿಯ ಬಸವರಾಜ್-ವಿಜಯಾ ಹಾಗೂ ಮಲ್ಲಾಡಿಹಳ್ಳಿ ಶ್ವೇತಾ-ನವೀನ್ ಈ ಎರಡು ಕುಟುಂಬವನ್ನು ನ್ಯಾಯಾಧೀಶರು, ವಕೀಲರು ಒಗ್ಗೂಡಿಸುವಲ್ಲಿ ಯಶಸ್ಸು ಕಂಡರು.

ಈ ಸಂದರ್ಭ ದಂಪತಿ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡರು. ನೆರೆದಿದ್ದ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಸಹನೆ, ತಾಳ್ಮೆಯಿಂದ ಕುಟುಂಬದ ಬಂಡಿ ಸಾಗಿಸುವಂತೆ ನ್ಯಾಯಾಧೀಶ ಎಸ್.ಶರವಣ ಕಿವಿಮಾತು ಹೇಳಿದರು.

ವಕೀಲರಾದ ಬಿ.ಎಸ್.ಪ್ರಭಕರ್, ಎಸ್.ವೇದಮೂರ್ತಿ, ಎಸ್.ವಿಜಯ, ಎನ್.ಎಚ್.ಶಾಂತವೀರಪ್ಪ ಸಂಧಾನದ ನೇತೃತ್ವ ವಹಿಸಿದ್ದರು.

ವಕೀಲರ ಸಂಘದ ತಾಲೂಕಾಧ್ಯಕ್ಷ ಎಲ್.ಕೆ.ಶಿವಕುಮಾರ್. ವಕೀಲರಾದ ಪೇಮಾ, ಹನುಮಂತೆಗೌಡ, ವಿಜಯ್, ಜಿ.ಇ.ರಂಗಸ್ವಾಮಿ, ಬುರನ್ ಬೇಗಂ, ರವಿ. ಡಿ.ಜಯಣ್ಣ, ಸಂತೋಷಕುಮಾರ್, ಶಶಿಧರ್, ದಿನಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net