ಜ.11ಕ್ಕೆ ಹಸ್ಬೆಂಡ್-360 ಹಾಸ್ಯ ನಾಟಕ ಪ್ರದರ್ಶನ

husband
Published on

ಬೆಂಗಳೂರು: ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲ ಚಟುವಟಿಕೆಯ ಮೂಲಕ ಪ್ರಸಿದ್ಧವಾಗಿರುವ ಅಂತರಂಗ ತಂಡವು ತನ್ನ 44ನೇ ವರ್ಷಾಚರಣೆ ಅಂಗವಾಗಿ ಇದೇ 11ಕ್ಕೆ ‘ಹಸ್ಬೆಂಡ್-360’ ಹಾಸ್ಯ ನಾಟಕ ಪ್ರದರ್ಶನವನ್ನು ಆಯೋಜಿಸಿದೆ.

ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ನಡೆಯುವ ಕೆಲಸ ಹಾಸ್ಯ ಸನ್ನಿವೇಶಗಳನ್ನು ರಸವತ್ತಾಗಿ ಚಿತ್ರಸಲಾಗಿದ್ದು, ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಹಾಸ್ಯವನ್ನು ನೀಡಲಿದೆ.

ಶನಿವಾರ ಸಂಜೆ 7 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಾಟಕ ಪ್ರದರ್ಶನ ನಡೆಯಲಿದ್ದು, ಆನ್‌ಲೈನ್‌ನಲ್ಲಿ ಬುಕ್ ಮೈ ಶೋ ಮೂಲಕ ಅಥವಾ ಅಂಕಲ್ ಶ್ಯಾಮ್ ದೂ: 98809 15409 ಮೂಲಕ ಟಿಕೆಟ್ ಬುಕ್ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net