ದಲಿತರ ಭಾವನೆಗಳಿಗೆ ಧಕ್ಕೆ

ಮಾನ್ವಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ದಲಿತಪರ ಸಂಘಟನೆಗಳ ಒಕ್ಕೂಟ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಸಂಚಾಲಕ ಬಸವರಾಜ ನಕ್ಕುಂದಿ, ಪ್ರಮುಖರಾದ ನಾಗಪ್ಪ ನಾಯಕ, ಮಲ್ಲಿಕಾರ್ಜುನ, ಕಾಶಿನಾಥ ಕುರ್ಡಿ, ರಮೇಶ ಅಮರಾವತಿ ಇತರರಿದ್ದರು.

Published on

ಮಾನ್ವಿ: ಸಂವಿಧಾನ ಬದಲಾವಣೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದ್ದಾರೆ ಎಂದು ಆರೋಪಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ದಲಿತಪರ ಸಂಘಟನೆಗಳ ಒಕ್ಕೂಟ ತಾಲೂಕು ಸಮಿತಿಯಿಂದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು.

ಸಂಚಾಲಕ ಬಸವರಾಜ ನಕ್ಕುಂದಿ ಮಾತನಾಡಿ, ರಾಜ್ಯದ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಕೂಡಲೇ ಡಿ.ಕೆ.ಶಿವಕುಮಾರ ಅವರನ್ನು ಡಿಸಿಎಂ ಸ್ಥಾನದಿಂದ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಪರಶುರಾಮ ಬಾಗಲವಾಡ, ಲಕ್ಷ್ಮಣ ಒಳಬಳ್ಳಾರಿ, ಉದಯ, ಯಲ್ಲಪ್ಪ ಬಾದರದಿನ್ನಿ, ಕೆ.ವೆಂಕಟೇಶ, ಅನಿಲ್, ಮುದುಕಪ್ಪ ಜಡೆ, ನಾಗಪ್ಪ ನಾಯಕ, ಮಲ್ಲಿಕಾರ್ಜುನ, ಕಾಶಿನಾಥ ಕುರ್ಡಿ, ರಮೇಶ ಅಮರಾವತಿ, ಸಿದ್ದಪ್ಪ ಅಮರಾವತಿ, ತಾಯಣ್ಣ ಕಿನ್ನರಿ, ಚಂದ್ರಶೇಖರ ನಾಯಕ, ಬಸವರಾಜ ಭಜಂತ್ರಿ, ಅಯ್ಯಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net