

ಹುನಗುಂದ: ಪಾಕಿಸ್ತಾನ ಪರ ಘೋಷಣೆಯನ್ನು ಹಾಕಿದ ವ್ಯಕ್ತಿಗಳನ್ನು ಮತ್ತು ಅದರ ಹಿಂದಿರುವ ದೇಶದ್ರೋಹಿಗಳನ್ನು ಬಂಧಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.
ನಂತರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಎಬಿವಿಪಿ ನಗರ ಘಟಕದ ಅಧ್ಯಕ್ಷ ನವೀನ ಪಾಟೀಲ ಮಾತನಾಡಿ, ಯುವತಿ ಅಮೂಲ್ಯ ಪಾಕ ಪರ ಘೋಷಣೆ ಹಾಕಿರುವುದರ ಹಿಂದೆ ದೇಶದ್ರೋಹಿ ಸಂಘಟನೆಗಳ ಕಾರ್ಯ ಅಡಗಿದೆ. ಹುಬ್ಬಳ್ಳಿಯಲ್ಲಿ ಕಾಶ್ಮೀರ ವಿದ್ಯಾರ್ಥಿಗಳು ಘೊಷಣೆ ಕೂಗಿದ್ದಾರೆ. ಮಂಗಳೂರಿನಲ್ಲಿ ನಡೆದ ಘಟನೆಗಳು ಕೂಡ ದೇಶದ್ರೋಹಿಗಳಿಂದ ನಡೆದಿದೆ. ಕೂಡಲೇ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಗ್ರಹಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿಎಂಎಸ್‌ಆರ್‌ವಿ ಕಾಲೇಜಿನ ವಿದ್ಯಾರ್ಥಿಗಳಾದ ಹನುಮಂತ ನಾಯಕ, ಗಣೇಶ ಚಿನ್ನದ, ಅಪ್ಪಾಜಿ ಹಿರೇಮಠ, ಶಿವಶಂಕರ ಬುರೆ, ಈರಣ್ಣ ಕಡ್ಲಿಮಟ್ಟಿ, ವಿರೇಶ ಹಳ್ಳೂರ, ಅಜಯ ನಾಯಕ, ಪ್ರೇಮ ಲಾಯದಗುಂದಿ, ರಾಕೇಶ ಸಿಂಧನೂರ, ಬಸವರಾಜ ಹಿರೇಮಠ, ಸತೀಶ ಬೆನಕನಡೋಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
EndFragment