ಬೇಟೆಗೆ ಹೋದವನೇ ಗುಂಡಿಗೆ ಬಲಿಯಾದ!

Hunting
Published on

ಕೊಡಗು: ಬೇಟೆಗೆಂದು ಕಾಡಿಗೆ ಹೋದವನೇ ಗುಂಡೇಟಿಗೆ ಬಲಿಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಗುಂಡಿಗೆರೆ ನಿವಾಸಿ ಹಮೀದ್ (35) ಗುಂಡಿಗೆ ಬಲಿಯಾದ ದುರ್ದೈವಿ.ಹಮೀದ್ ಸೇರಿದಂತೆ ಮೂವರು ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರು.ಈ ಸಂದರ್ಭ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ಹಾರಿ ಸಾವನ್ನಪ್ಪಿದ್ದಾನೆ.

ಜೊತೆಯಲ್ಲಿತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದಾರೆ.ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಇನ್ನೂ ಬೇಟೆಗೆ ಹೋದವರಲ್ಲಿ ಇನ್ನಷ್ಟು ಜನರು ಇದ್ದಾರೆ.ಈ ಬಗ್ಗೆ ತನಿಖೆ ಆಗಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.ಸ್ಥಳಕ್ಕೆ ಕೊಡಗು ಎಸ್ಪಿ ಎಂ.ಅಯ್ಯಪ್ಪ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net