

ಹುಣಸೂರು : ವಿಶ್ವಕರ್ಮ ಎಂಬುದು ಕೇವಲ ಜಾತಿ ಅಲ್ಲ, ವಿಶೇಷ ವೃತ್ತಿ ಸಂಸ್ಕೃತಿಯ ಸಮುದಾಯ ಎಂದು ವಿಶ್ಕಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆಂಡಗಣ್ಣ ಅಭಿಪ್ರಾಯಪಟ್ಟರು. ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ವಿಶ್ವಕರ್ಮರು ಇಲ್ಲದ ಸಮಾಜವು ಪರಿಪೂರ್ಣ ಆಗಲು ಸಾಧ್ಯವಿಲ್ಲ. ವಿಶ್ವಕರ್ಮ ಎನ್ನುವುದು ಒಂದು ಜಾತಿಗೆ ಸೀಮಿತ ಪದವಲ್ಲ. ಅದೊಂದು ಸಂಸ್ಕೃತಿ, ಅದೊಂದು ಸಭ್ಯತೆ, ಪಂಚವೃತ್ತಿಗಳ ಮೂಲಕ ಸಮಾಜಕ್ಕೆ ಈ ನೆಲದ ಸಂಸ್ಕೃತಿ, ಕಲೆ, ಸೇವೆಗಳ ಮೂಲಕ ಪರಂಪರೆಯನ್ನು ಸಂಪದ್ಭರಿತಗೊಳಿಸಿದ್ದಾರೆ. ಕಾಲಾನಂತರದಲ್ಲಿ ಅದೀಗ ಜಾತಿಯಾಗಿ ಪರಿವರ್ತಿತವಾಗಿದೆ ಎಂದರು.
ತೇತ್ರಾಯುಗದಿಂದ ಇಂದಿನವರೆಗೆ ಪ್ರತಿಯೊಂದು ಯುಗದಲ್ಲೂ ವಿಶ್ವಕರ್ಮರ ವಿಶೇಷತೆ ಇದೆ.
ಅವರಿಲ್ಲದ ಸಮಾಜ ಪರಿಪೂರ್ಣ ವಾಗಲು ಸಾಧ್ಯವಿಲ್ಲ ಎಂದರು. ಇಡೀ ವಿಶ್ವವನ್ನೇ ಕಟ್ಟುವ ಕಾರ್ಯದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಸರ್ಕಾರಗಳು ಜಯಂತಿ ಆಚರಣೆಗೆ ಅವಕಾಶ ನೀಡುವ ಮೂಲಕ ಸಮಾಜಕ್ಕೆ ಗೌರವ ನೀಡಿರುವುದು ಸ್ವಾಗತಾರ್ಹ ಎಂದರು.
ಮುಖಂಡ ಕಲ್ಕುಣಿಕೆ ಶ್ರೀನಿವಾಸ ಮಾತನಾಡಿದರು.
ಪೌರಾಯುಕ್ತೆ ಕೆ.ಮಾನಸಾ, ತಹಸೀಲ್ದಾರ್ ಜೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಕೆ.ಪಿ.ಕೃಷ್ಣಾಚಾರಿ, ಮುಖಂಡರಾದ ಸರ್ವೇಯರ್ ಕುಮಾರ್, ಗೌರವಾಧ್ಯಕ್ಚ ಚಂದ್ರಾಚಾರ್, ಶ್ರೀಧರ, ನಾರಾಯಣಾಚಾರ್, ರಾಣಿ ರಾಜಮ್ಮ, ಜಸ್ವಂತ್, ವೆಂಕಟೇಶಾಚಾರ್, ವೀರಭದ್ರ, ಪುಟ್ಟರಾಜು ಇತರರು ಇದ್ದರು.