

ಹುಣಸೂರು : ರೋಟರಿ ಸಂಸ್ಥೆ ವಲಯ 6ರ 2024 ನೇ ಸಾಲಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹುಣಸೂರು ರೋಟರಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಭಾನುವಾರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ಸುಗ್ಗಿ ಸಂಭ್ರಮ 2024 ಕಾರ್ಯಕ್ರಮದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹುಣಸೂರು ಕ್ಲಬ್‌ನ ಕಲಾವಿದರು ಮಿಂಚಿದರು. ರೋಟರಿ ಕ್ಲಬ್ ಅಧ್ಯಕ್ಷ ರೊ.ಡಾ.ಪ್ರಸನ್ನರ ನೇತೃತ್ವದಲ್ಲಿ ಚಾಂಪಿಯನ್ ಶಿಪ್ ಪಟ್ಟವನ್ನೂ ಮುಡಿಗೇರಿಸಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ 2024ನೇ ಸಾಲಿನ ಇಂಡಿಯನ್ ಐಕಾನ್ಸ್ ದಾದಾಸಾಹೇಬ್ ಾಲ್ಕೆ ಸಾಧಕರ ಪ್ರಶಸ್ತಿ ವಿಜೇತ ರೊ.ಡಾ.ನಾಗರಾಜ್ ಮಾತನಾಡಿ, ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಶ್ರದ್ಧೆ, ಸತತ ಪರಿಶ್ರಮವಿದ್ದರೆ ಸಾಧನೆ ಸುಲಭಸಾಧ್ಯ. ಸಾಸುವ ಛಲ ನಮ್ಮಲ್ಲಿರಬೇಕು. ಸಾಮಾಜಿಕ ಸೇವೆ ಎನ್ನುವುದು ಕೇವಲ ್ಯಾಷನ್ ಆಗದೇ ನಮ್ಮೊಳಗಿನ ಭಾವನೆ ಆಗಬೇಕು. ರೋಟರಿ ಸಂಸ್ಥೆಯ ನಿಸ್ವಾರ್ಥ ಸೇವೆಯೇ ಇಲ್ಲದವರ ಬದುಕಿಗೆ ನೆರವಾಗುವುದರ ಜತೆಗೆ ಸಾಧನೆ ಗೈದವರನ್ನು ಗುರುತಿಸಿ ಆದರಿಸುವುದಾಗಿದೆ ಎಂದರು.
ಸಹಾಯಕ ಗವರ್ನರ್ ರೋ.ಆರ್.ಆನಂದ್ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆ ಸೇವೆಯ ಮೂಲಕ ಒಬ್ಬರನ್ನೊಬ್ಬರನ್ನು ಒಂದುಗೂಡಿಸುವ ಕಾರ್ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಸ್ನೇಹದೊಂದಿಗೆ ಸೇವೆ ನಮ್ಮೆಲ್ಲರ ಗುರಿಯಾಗಲಿ ಎಂದರು.
ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ರೊ.ಡಾ.ಕೆ.ಪಿ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಆರ್.ಕೃಷ್ಣಕುಮಾರ್, ನಿಕಟಪೂರ್ವ ಅಧ್ಯಕ್ಷ ಚನ್ನಕೇಶವ, ವಲಯ ಸೇನಾನಿ ಪಾಂಡುಕುಮಾರ್, ರಾಜೇಗೌಡ, ಸಾಂಸ್ಕೃತಿಕ ಸಮಿತಿ ಚೇರ‌್ಮನ್ ಡಾ.ಬಸವರಾಜು, ಸುನೀತಾ ಮಹೇಶ್, ಮಾಜಿ ಸಹಾಯಕ ಪ್ರಾಂಥಪಾಲ ಧರ್ಮಾಪುರ ನಾರಾಯಣ್, ಡಾ.ವೃಷಬೇಂದ್ರಸ್ವಾಮಿ, ರೋ.ಧರ್ಮಾಪುರ ಶಾಮಣ್ಣ, ಗಿರೀಶ್, ಕುಶಾಲನಗರದ ರೋ.ಮಹೇಶ್, ಮಡಿಕೇರಿಯ ಮಹೇಶ್, ಉಲ್ಲಾಸ್, ಶಶಿಕುಮಾರ್ ಮತ್ತು ರೋಟರಿ ಕುಟುಂಬ ಸದಸ್ಯರು ಹಾಜರಿದ್ದರು.
ಗೆಲುವಿನ ಸುರಿಮಳೆ :
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹುಣಸೂರು ಕ್ಲಬ್ ಗೆಲುವಿನ ಸರಮಾಲೆಯಲ್ಲೇ ಮಿಂದೆದ್ದಿತು. ವರ್ಷ ವಯೋಮಾನದ ಹಾಡುಗಾರಿಕೆಯಲ್ಲಿ ಹುಣಸೂರು ಕ್ಲಬ್‌ನ ವಿಧಾತ್ ಪ್ರಥಮ, ಆಲೂರು ಸಿದ್ದಾಪುರದ ಲಷಿತಾ ದ್ವಿತೀಯಸ್ಥಾನ ಪಡೆದಿದ್ದಾರೆ. 6-14ವರ್ಷದೊಳಗಿನ ವಿಭಾಗದಲ್ಲಿ ಹುಣಸೂರಿನ ಮೃದಂಗ್ ದ್ವಿತೀಯ ಸ್ಥಾನ, 14-21 ವರ್ಷ ವಯೋಮಾನದ ವಿಭಾಗದಲ್ಲಿ ಚಿದ್ಭವಿ ತೃತೀಯ ಸ್ಥಾನ ಗಳಿಸಿದರು.
ಸೋಲೋ ಸಿಂಗಿಂಗ್ ಮಹಿಳಾ ವಿಭಾಗದಲ್ಲಿ ಹುಣಸೂರಿನ ಸಂಗೀತಾ ಪ್ರಥಮ, ಪುರುಷರ ಸೋಲೋ ಸಿಂಗಿಂಗ್‌ನಲ್ಲಿ ಚನ್ನಕೇಶವ ಪ್ರಥಮ, ಡ್ಯೂಯೆಟ್ ಡ್ಯಾನ್ಸ್ ವಿಭಾಗದಲ್ಲಿ ಹುಣಸೂರಿನ ಸಂಗೀತ-ಮೃದಂಗ್ ಜೋಡಿ ಪ್ರಥಮಸ್ಥಾನ ಗಿಟ್ಟಿಸಿಕೊಂಡಿತು. ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಹುಣಸೂರು ತಂಡ ಪ್ರಥಮ ಸ್ಥಾನ, ನಾಟಕ ಪ್ರದರ್ಶನದಲ್ಲಿ ಹುಣಸೂರು ತಂಡ ಪ್ರಥಮ, ಸ್ಟಾಂಡ್ ಅಪ್ ಕಾಮಿಡಿಯಲ್ಲಿ ಹುಣಸೂರು ಕ್ಲಬ್‌ನ ಡಾ.ಬಸವರಾಜು ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. 6ವರ್ಷದ ನೃತ್ಯ ವಿಭಾಗದಲ್ಲಿ ಹುಣಸೂರಿನ ವಿಧಾತ್ ದ್ವಿತೀಯ, 6-14 ವಯೋಮಾನದಲ್ಲಿ ಮೃದಂಗ ದ್ವಿತೀಯ, 14-21 ವಯೋಮಾನದ ವಿಭಾಗದಲ್ಲಿ ಲಾವಣ್ಯಗೌಡ ದ್ವಿತೀಯ ಸ್ಥಾನ ಗಳಿಸಿದರು.