ಹುಣಸೀಕಟ್ಟಿ ಗ್ರಾಪಂ ‘ಶೋಭಾ’ಯಮಾನ

Hunasikatti
Published on

ನರಗುಂದ: ತಾಲೂಕಿನ ಹುಣಸೀಕಟ್ಟಿ ಗ್ರಾಪಂ ಅಧ್ಯಕ್ಷೆಯಾಗಿ ಶೋಭಾ ಮುಳ್ಳೂರ ಉಪಾಧ್ಯಕ್ಷೆಯಾಗಿ ಶಾಂತವ್ವ ದ್ಯಾಮಪ್ಪ ದೇವಕ್ಕಿ ಆಯ್ಕೆಯಾದರು.

ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶೋಭಾ ಬಸಪ್ಪ ಮುಳ್ಳೂರ ಹಾಗೂ ಮಹಾದೇವಿ ಶೇಖರಪ್ಪ ಭರಮಪ್ಪನವರ ನಾಮಪತ್ರ ಸಲ್ಲಿಸಿದ್ದರು. 8 ಮತ ಪಡೆದ ಶೋಭಾ ಮುಳ್ಳೂರ ಅಧ್ಯಕ್ಷೆಯಾಗಿ ಆಯ್ಕೆಗೊಂಡರು. ಮಹಾದೇವಿ ಭರಮಪ್ಪನವರ 6 ಮತ ಪಡೆದು ಪರಾಭವಗೊಂಡರು.

ಅ ವರ್ಗ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತವ್ವ ದ್ಯಾಮಪ್ಪ ದೇವಕ್ಕಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಅವರು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಿಡಿಒ ವಿ.ಆರ್. ರಾಯನಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net