

cattle killed
ಭಟ್ಕಳ: ಅರಣ್ಯ ಇಲಾಖೆಗೆ ಸೇರಿದ ಮಗ್ದೂಮ್ ಕಾಲನಿಯ ಗುಡ್ಡ ಪ್ರದೇಶದಲ್ಲಿ ನೂರಾರು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಹಲವು ದಿನಗಳಿಂದ ಇಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಹಿಂದು ಸಂಘಟನೆಯ ಕೆಲವು ಯುವಕರು ಸ್ಥಳಕ್ಕೆ ತೆರಳಿ ಅಲ್ಲಿನ ಮೂಳೆಗಳ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಮಗ್ದೂಮ್ ಕಾಲನಿಯ ಗುಡ್ಡದಲ್ಲಿ ಎರಡು-ಮೂರು ದಿನಗಳ ಹಿಂದೆಯೇ ಗೋಹತ್ಯೆ ನಡೆದಿರಬಹುದು ಎಂದು ಯುವಕರು ಶಂಕಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜಾನುವಾರು ಹತ್ಯೆ ನಡೆಯುತ್ತಿದ್ದರೂ ಭಟ್ಕಳ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ, ಸ್ಥಳೀಯ ಆಡಳಿತದ ವೈಪಲ್ಯದಿಂದ ಎಲ್ಲವೂ ಮುಚ್ಚಿಹೋಗುತ್ತಿದೆ ಎಂದು ಹಿಂದು ಸಂಘಟನೆಯ ಜಯಂತ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪೊಲೀಸರು ನಾಕಾಬಂದಿ ನಡೆಸಿ ದನಗಳ್ಳರನ್ನು ಬಂಧಿಸಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ರಕ್ಷಿಸುತ್ತಿದ್ದರು, ಇಷ್ಟೊಂದು ಪ್ರಮಾಣದ ಮೂಳೆಗಳು ಪತ್ತೆಯಾಗಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸ್ಥಳದಲ್ಲಿದ್ದ ಮೂಳೆಗಳು ಹಠಾತ್ ನಾಪತ್ತೆಯಗಿವೆ. ಆದರೆ ಅಲ್ಲಿ ಇರುವ ಟ್ಯಾಂಕನಲ್ಲಿ ರಕ್ತಸಿಕ್ತ ಮೂಳೆಗಳು ಹಾಗೆ ಇದ್ದೂ ಅದರ ವಿಡಿಯೋಗಳು ಜಾಲತಾಣದಲ್ಲಿ ಮತ್ತೆ ಸದ್ದು ಮಾಡಲು ಆರಂಭಿಸಿವೆ.
ಅರಣ್ಯ ಇಲಾಖೆಯ ಸ್ಥಳದಲ್ಲಿ ಇಷ್ಟೊಂದು ಪ್ರಮಾಣದ ಜಾನುವಾರುಗಳ ತಾಜ್ಯಗಳು ಪತ್ತೆಯಾದರೂ ಅರಣ್ಯ ಇಲಾಖೆ ಯಾವೊಂದು ಕ್ರಮಕೈಗೊಳ್ಳದೆ ಇರುವದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ತ್ಯಾಜ್ಯ ಬಾವಿ ಸೇರಿ ಜಲಮೂಲವೂ ಕಲುಷಿತಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಮೂಳೆಗಳನ್ನು ತೆರವುಗೊಳಿಸಲು ಮಾತ್ರ ಸಾಕಷ್ಟು ಆಸಕ್ತಿ ತೊರುತ್ತಿರುವಂತೆ ಕಾಣುತ್ತಿದೆ. ಉಸ್ತುವಾರಿ ಸಚಿವರು ಗೊ ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಇಲಾಖೆಗಳಿಗೆ ಸೂಚನೆ ನೀಡಬೇಕಿದೆ. ಗೋವಿಂದ ನಾಯ್ಕ, ಪಶ್ಚಿಮಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಮಗ್ದೂಮ್ ಕಾಲನಿಯಲ್ಲಿ ಬಿದ್ದ ಮೂಳೆಗಳನ್ನು ಸ್ವಚ್ಛಗೊಳಿಸುವಂತೆ ಪೊಲೀಸ್ ಇಲಾಖೆ ನಮಗೆ ಸೂಚನೆ ನೀಡಿತ್ತು. ಅಲ್ಲಿ ತೆರಳಿ ನೋಡಿದರೆ ಎಲ್ಲಿಯೂ ಮೂಳೆಗಳು ಪತ್ತೆಯಾಗಿಲ್ಲ. ನಾವು ಹೋಗುವ ಮೊದಲೇ ಮೂಳೆಗಳನ್ನು ಯಾರೋ ಸ್ವಚ್ಚಗೊಳಿಸಿದ್ದಾರೆ. ವೆಂಕಟೇಶ ನಾವುಡ ಮುಖ್ಯಾಧಿಕಾರಿ ಪುರಸಭೆ ಭಟ್ಕಳ