ನೂರು ಉಚಿತ ಹೆರಿಗೆ ಸೇವೆ

15blh2 ಉಚಿತ ಹೆರಿಗೆ ಯೋಜನೆಗೆ ಚಾಲನೆ
Published on

ಬೈಲಹೊಂಗಲ: ನಗರದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್​ಜಿವಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ, ಸಂಶೋಧನಾ ಕೇಂದ್ರ ಹಾಗೂ ಎಸ್​ಜಿವಿ ಈಶಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಅ.14 ರಿಂದ 2026ರ ೆಬ್ರುವರಿ 26ರ ವರೆಗೆ ಒಟ್ಟು 100 ಉಚಿತ ಹೆರಿಗೆ ಸೇವೆ ಮಾಡಲಾಗುವುದು ಎಂದು ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ತಿಳಿಸಿದರು.

ನಗರದ ಮೂರುಸಾವಿರ ಮಠದಲ್ಲಿ ಪ್ರಭುನೀಲಕಂಠ ಸ್ವಾಮೀಜಿ 32ನೇ ಜನ್ಮದಿನದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಮಾತೃ ವಾತ್ಸಲ್ಯ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿನೂತನ ಕಾರ್ಯಕ್ರಮ ರೂಪಿಸಿದ್ದು, ಬಡಜನರಿಗೆ ಅನುಕೂಲವಾಗಲಿದೆ. ಕಾಳಜಿಪೂರ್ವಕವಾಗಿ ತ ವೈದ್ಯರ ತಂಡ ಹೆರಿಗೆ ಸೇವೆ ನೀಡಲಿದೆ ಎಂದರು.

ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿ, ಪ್ರಭುನೀಲಕಂಠ ಸ್ವಾಮೀಜಿ ಜನ್ಮದಿನ ಅಂಗವಾಗಿ ಉಚಿತ ಹೆರಿಗೆ ಸೇವೆ ಆಯೋಜಿಸಿರುವ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಸುಭಾಸ ಬಾಗಡೆ, ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಂದ್ರ ಪಾಟೀಲ ಮಾತನಾಡಿದರು. ಮುನವಳ್ಳಿಯ ಸೋಮಶೇಖರ ಮಠದ ಮುರಂದ್ರ ಸ್ವಾಮೀಜಿ, ವಿಶ್ವನಾಥ ಹಿರೇಮಠ, (ಬಾಳೇಕುಂದರಗಿ), ಅನಿಲ ಮೆಟಗುಡ್ಡ, ಸಂಸ್ಥೆ ನಿರ್ದೇಶಕರಾದ ವಿರೂಪಾ ಕೋರಿಮಠ, ವಿ.ಕೆ.ಬಡಿಗೇರ, ಬಿ.ಎಸ್​.ಗುರಣ್ಣವರ, ಸಿ.ಎಸ್​.ಕುಸಲಾಪುರ, ಆರ್​.ಜಿ.ಹಿರೇಮಠ, ಎಸ್​.ವಿ.ಹುಲ್ಲೆಪ್ಪನವರಮಠ, ಬಿ.ಎಸ್​.ಹೊಂಡೇದ, ಪಿ.ವಿ.ಪೂಜೇರ ಇತರರಿದ್ದರು. ಪ್ರಾಚಾರ್ಯ ಎನ್​.ಎಸ್​.ಚಿಲಮೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net