ಹುಂಡೀಪುರ ಗ್ರಾಪಂಗೆ ನಂಜಪ್ಪ ಅಧ್ಯಕ್ಷ

06-FEB-GPT-2-
ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ನಂಜಪ್ಪ ಅವರನ್ನು ಮುಖಂಡರು ಅಭಿನಂದಿಸಿದರು. ಮಧು, ರಾಜು, ವೃಷಭೇಂದ್ರ, ಯೋಗೇಶ್‌ಕುಮಾರ್, ವೀರಪ್ಪ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ಹುಂಡೀಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನಂಜಪ್ಪ ಅವಿರೋಧ ಆಯ್ಕೆಯಾದರು.

ಬಿಜೆಪಿ ಆಂತರಿಕ ಒಪ್ಪಂದದಂತೆ ಶಿವಬಸಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ನಂಜಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು.

ನಂತರ ನಂಜಪ್ಪ ಮಾತನಾಡಿ, ಮಾಜಿ ಶಾಸಕ ಸಿ.ಎಸ್.ನಿರಂಜನಕುಮರ್ ಅವರ ಸಹಕಾರದಿಂದ ಕಳೆದ ಎರಡೂವರೆ ವರ್ಷ ಉಪಾಧ್ಯಕ್ಷರಾಗಿ, ನಂತರ ಒಂದು ವರ್ಷ ಸದಸ್ಯರಾಗಿ ತಾವು ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಮುಂದಿನ ಅವಧಿಯಲ್ಲಿಯೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸುವುದಾಗಿ ಹೇಳಿದರು.

ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ಮಧು, ರಾಜು, ಆನಂದ, ಬಿ.ಕೆ.ಲಕ್ಷ್ಮೀ, ಪಾರ್ವತಿ, ಅಂಬಿಕಾ, ಸಾಕಮ್ಮ, ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಮುಖಂಡರಾದ ವೃಷಭೇಂದ್ರ, ಯೋಗೇಶ್ ಕುಮಾರ್, ವೀರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net