ರಾಯರ ಹುಂಡಿಯಲ್ಲಿ ದಾಖಲೆಯ ಕಾಣಿಕೆ

31-07-Shiva-4
Published on

ರಾಯಚೂರು: ಮಂತ್ರಾಲಯ ರಾಯರ ಮಠದಲ್ಲಿನ ಹುಂಡಿಗಳಿಗೆ ಪ್ರಸಕ್ತ ತಿಂಗಳಲ್ಲಿ ದಾಖಲೆಯ ಮೊತ್ತದ ಕಾಣಿಕೆ ಭಕ್ತರಿಂದ ಬಂದಿದ್ದು, ಇದುವರೆಗೂ ಬಂದ ದೊಡ್ಡ ಮೊತ್ತ ಇದಾಗಿದೆ. ಶ್ರೀಮಠದಲ್ಲಿ ಸೋಮವಾರ ಹುಂಡಿಗಳಲ್ಲಿನ ಹಣದ ಎಣಿಕೆ ನಡೆಸಿದಾಗ 3.69 ಕೋಟಿ ರೂ., 7.05 ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿ ಒಟ್ಟು 3.76 ಕೋಟಿ ರೂ. ಕಾಣಿಕೆಯಾಗಿ ಬಂದಿದೆ. ಜತೆಗೆ 99 ಗ್ರಾಂ ಬಂಗಾರ ಮತ್ತು 940 ಗ್ರಾಂ ಬೆಳ್ಳಿಯನ್ನು ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ. ಇದುವರೆಗೂ ಹುಂಡಿಗೆ ಮೂರು ಕೋಟಿ ರೂ.ವರೆಗೆ ಕಾಣಿಕೆ ಬರುತ್ತಿತ್ತು. ಆರಾಧನೆ ಮುಂತಾದ ಸಂದರ್ಭಗಳಲ್ಲಿ 3.30 ಕೋಟಿ ರೂ.ವರೆಗೆ ಬರುತ್ತಿತ್ತು. ಈ ತಿಂಗಳಲ್ಲಿ ಅತ್ಯಧಿಕ 3.76 ಕೋಟಿ ರೂ.ಗಳು ಕಾಣಿಕೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net