

ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವ
ಹುಣಸೂರು : ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಎಸ್.ಎಫ್. ಐ.(ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ) ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಸಂಘಟನೆ ಸದಸ್ಯರು, ಕೇಂದ್ರ ಗೃಹಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಎನ್.ಜೀವನ್ ಕುಮಾರ್, ಅಮಿತ್ ಶಾ ಅವರ ಹೇಳಿಕೆ ಆರೆಸ್ಸೆಸ್, ಬಿಜೆಪಿ ಜಾತಿವಾದಿ ಮನಸ್ಥಿತಿ ಬಿಂಬಿಸುತ್ತದೆ ಎಂದರು.
ಸಂಘಟನೆ ತಾಲೂಕು ಕಾರ್ಯದರ್ಶಿ ಎಂ. ಪ್ರಿಯಾ ಮಾತನಾಡಿ, ಕೇಂದ್ರ ಸರ್ಕಾರ ದೇಶದ ವಿಶ್ವವಿದ್ಯಾನಿಲಯಗಳನ್ನು ದಮನ ಮಾಡುತ್ತಿದೆ. ಐಐಟಿ ಗಳಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಕೂಡಲೇ ಅಮಿತ್ ಶಾ ಕ್ಷಮೆಯಾಚಿಸಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಬಿ.ಎಸ್.ಆಕಾಶ್, ಭವಾನಿ, ಪ್ರೀತಮ್. ಮುರಳಿ, ಸಂಜಯ್ ಕುಮಾರ್, ಭರತ್, ಮಹದೇವ, ಶಿವರಾಮು, ರಾಧಾಕೃಷ್ಣ ಚಿತ್ತರಂಜನ್ ಇತರರು ಇದ್ದರು.