

ಹುನಗುಂದ: ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿ ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸಬೇಕೆಂದು ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಕಾಂತ ಪಾಟೀಲ ಹೇಳಿದರು.
ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಹತ್ತಿರದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿಯಮಿತದ 2019-20ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಮ್ಮ ಬ್ಯಾಂಕ್ ಕಳೆದ 59 ವರ್ಷಗಳಿಂದ ಗ್ರಾಹಕರ ಸಹಕಾರದಿಂದ ಉತ್ತಮವಾದ ಆರ್ಥಿಕ ವ್ಯವಹಾರ ನಡೆದಿದೆ. 2020ರ ಮಾರ್ಚ್ 31ರ ಅಂತ್ಯಕ್ಕೆ 15.21 ಕೋಟಿ ರೂ. ಷೇರು ಬಂಡವಾಳ, 19.90 ಕೋಟಿ ರೂ. ಕಾಯ್ದಿಟ್ಟ ಮತ್ತು ಇತರ ನಿಧಿಗಳು ಇದ್ದು 2.35 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಇಳಕಲ್ಲ ಶಾಖೆಯ ಬ್ಯಾಂಕ್‌ನಲ್ಲಿ ಪಿಗ್ಮಿ ಏಜೆಂಟ್ ಅವ್ಯಹಾರ ನಡೆಸಿದ ಬಗ್ಗೆ ಗ್ರಾಹಕರು ಕೇಳಿದ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಿ, ಅದರ ಬಗ್ಗೆ ಸಂಪೂರ್ಣವಾಗಿ ತನಿಖೆ ಈಗಾಗಲೇ ನಡೆದಿದೆ. ಬ್ಯಾಂಕ್ ರಿಸರ್ವ್ ಬ್ಯಾಂಕ್‌ನ ನಿಗಾದಲ್ಲಿದೆ. ಯಾವುದೇ ಸಿಬ್ಬಂದಿ ಅವ್ಯವಹಾರ ಮಾಡಿದರೆ ನೌಕರಿಯಿಂದ ತೆಗೆದು ಹಾಕಲಾಗುವುದು ಎಂದರು.
ಬ್ಯಾಂಕ್‌ನ ಗ್ರಾಹಕ ಸಂಗಣ್ಣ ಆನೆಹೊಸೂರ ಮಾತನಾಡಿ, ಎಟಿಎಂ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು. ಇತ್ತೀಚೆಗೆ ನಿಧನರಾದ ಬ್ಯಾಂಕ್‌ನ ಎಲ್ಲ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಉಪಾಧ್ಯಕ್ಷೆ ಶಂಕುತಲಾ ಗಂಜಿಹಾಳ, ನಿರ್ದೇಶಕರಾದ ತಿರುಪತಿ ಕುಷ್ಟಗಿ, ಮಹಾಂತೇಶ ಅವಾರಿ, ಬಸವರಾಜ ಗದ್ದಿ, ರಾಜಕುಮಾರ ಬಾದವಾಡಗಿ, ರವಿ ಹುಚನೂರ, ಬಸವರಾಜ ನಾಡಗೌಡರ, ಮಲ್ಲಪ್ಪ ವೀರಾಪುರ, ಸಂಗಣ್ಣ ಕಡಪಟ್ಟಿ, ಬಿ.ವಿ. ಪಾಟೀಲ, ನೀಲಪ್ಪ ತಪೇಲಿ, ಎಸ್.ಎಚ್. ಬಲಕುಂದಿ, ದೇವು ಡಂಬಳ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಅನ್ನಪೂರ್ಣ ಹೊಸೂರ, ಮಂಜುನಾಥ ಆಲೂರ, ಸುಜಾತ ನಾಗರಾಳ, ಶಿವಾನಂದ ಕಂಠಿ, ಪ್ರಧಾನ ವ್ಯವಸ್ಥಾಪಕ ಸಿ.ಎಂ. ಕಾಮಾ, ಉಪ ವ್ಯವಸ್ಥಾಪಕ ಕೆ.ಎಸ್. ಆಲದಿ, ನಿವೃತ್ತ ವ್ಯವಸ್ಥಾಪಕ ಎಸ್.ಬಿ. ಗಂಜಿಹಾಳ, ಎನ್.ಆರ್. ಗೌಡರ, ಜಿ.ಬಿ. ಗೌಡರ, ಎಸ್.ಎಸ್. ಶಿರೂರ, ಎಸ್.ಪಿ. ಪಟ್ಟಣಶೆಟ್ಟಿ, ರಾಜು ಬಯ್ಯಪುರ, ಸಿ.ಎಸ್. ಹೂಲಗೇರಿ, ಎಸ್.ಎಸ್. ಶಿರೂರ ಇತರರು ಇದ್ದರು. ದಿವ್ಯಾ ಆಲದಿ, ದರ್ಶಿನಿ ಆಲದಿ ಪ್ರಾರ್ಥಿಸಿದರು. ಮುತ್ತು ಬಂಗಾರಿ ನಿರೂಪಿಸಿದರು.
EndFragment