ಮೊಲ ಬೇಟೆಯಾಡಿದ ಆರೋಪಿ ಬಂಧನ

HND NEWS 10-1
Published on

ಹುನಗುಂದ: ಮೊಲಗಳನ್ನು ಬೇಟೆಯಾಡಿ, ನವಿಲು ಕೈಯಲ್ಲಿ ಹಿಡಿದು ಟಿಕ್‌ಟಾಕ್ ವಿಡಿಯೋ ಮಾಡಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹುನಗುಂದ ತಾಲೂಕಿನ ಮಾದಾಪುರ ಗ್ರಾಮದ ಯುವಕ ವಿಠ್ಠಲ ಮೈಲಾರಪ್ಪ ವಾಲೀಕಾರ ಎಂಬುವ ಆರೋಪಿಯನ್ನು ಅರಣ್ಯಾಧಿಕಾರಿಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಬುಧವಾರ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಈ ವಿಡಿಯೋ ಬಾಗಲಕೋಟೆ ಅರಣ್ಯ ಇಲಾಖೆ ಅಪರಾಧ ವಿಭಾಗದ ಗಮನಕ್ಕೆ ಬಂದಿತ್ತು. ಹುನಗುಂದ ವಲಯ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ವಿಜಯಕುಮಾರ ನಾಯ್ಕ, ಮಹೇಶ ಕಲ್ಲೂರ, ಅರಣ್ಯ ರಕ್ಷಕರಾದ ರೇಷ್ಮಾ ರಾಠೋಡ, ವಿನೋದ ಬೊಂಬಲೇಕರ, ಶರಣಪ್ಪ ಘಂಟಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net