ವಿದ್ಯಾರ್ಥಿಗಳ ತಪಾಸಣೆ

Hnd-21-2
Published on

ಹುನಗುಂದ: ಕಳೆದ ನ.17 ರಂದು ಪದವಿ ಕಾಲೇಜು ಪ್ರಾರಂಭಿಸಲು ಸರ್ಕಾರದ ಅನುಮತಿ ದೊರೆತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಂದು ಕಾಲೇಜು ಪಾಲಿಸುವುದು ಕಡ್ಡಾಯವಾಗಿದೆ ಎಂದು ಪ್ರಾಚಾರ್ಯ ಎಸ್.ಕೆ. ಮಠ ತಿಳಿಸಿದರು.

ಪಟ್ಟಣದ ವಿಜಯ ಮಹಾಂತೇಶ ಎಸ್.ಆರ್. ವಸದ ಕಲಾ, ವಿಜ್ಞಾನ ಮತ್ತು ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್-ಗೈಡ್ಸ್ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ವೈರಸ್ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ವಿದ್ಯಾರ್ಥಿಗಳು ಆದಷ್ಟು ರೋಗದ ಕುರಿತು ಜಾಗೃತಿ ವಹಿಸುವುದು ಅವಶ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಥರ್ಮಲ್ ಸ್ಕಾೃನಿಂಗ್, ಕೋವಿಡ್ ಟೆಸ್ಟ್ ನಡೆಸಲಾಗುವುದು ಎಂದು ಹೇಳಿದರು.

ಪ್ರೊ.ಎಸ್.ಆರ್. ನಾಗಣ್ಣವರ, ಬಿ.ಬಿ. ಕಡ್ಲಿ, ಡಾ.ಡಿ.ಎಸ್. ತಿಪ್ಪೇಸ್ವಾಮಿ, ಎಸ್.ಬಿ. ಅಮಲಿಕೊಪ್ಪ, ಎಸ್.ಬಿ. ಚಳಗೇರಿ, ಎಲ್.ಎನ್. ಕುಲಕರ್ಣಿ, ಎಸ್.ಆರ್. ಗೊಲಗುಂಡ, ಎಸ್.ಎಸ್. ಪಾಟೀಲ, ನವೀನ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net