ಐಟಿಐ ಆನ್‌ಲೈನ್ ಪರೀಕ್ಷೆ ರದ್ದು ಮಾಡಿ

HND NEWS 16-1
Published on

ಹುನಗುಂದ: ಐಟಿಐ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ರದ್ದು ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ಸಹ ಸಂಚಾಲಕ ಅನಿಲ ಗುರುಬಸಣ್ಣವರ ಮಾತನಾಡಿ, ಐಟಿಐ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಿದರೆ ಕಂಪ್ಯೂಟರ್ ಮಾಹಿತಿ ಇಲ್ಲದವರಿಗೆ ತೊಂದರೆಯಾಗಲಿದೆ. ಅದರಲ್ಲೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಗೆ ಒಳಗಾಗಲಿದ್ದಾರೆ. ಆದ್ದರಿಂದ ಆನ್‌ಲೈನ್ ಪರೀಕ್ಷೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ವಿನಯ ಮಲರಖಾನ್ ಮಾತನಾಡಿ, ಐಟಿಐ ಕೌಶಲ ತರಬೇತಿ ಕೋರ್ಸ್ ಆಗಿದೆ. ರೇಖಾಚಿತ್ರ ಹಾಗೂ ಕೈಬರಹ ಪರೀಕ್ಷೆಯನ್ನು ಮಾಡಿದರೆ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಮೊದಲೇ ವರ್ಷದ ಪರೀಕ್ಷೆಯನ್ನು ಆಯಾ ಸಂಸ್ಥೆಗಳಲ್ಲೇ ನಡೆಸಬೇಕು. ನಂತರ ಬೋರ್ಡ್‌ನವರು ನಡೆಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಾದ ಪುನೀತ ಮನ್ನಾಪುರ, ಅಭಿಷೇಕ ಕಂಠಿ, ನಿರಂಜನ ಪ್ರಭು, ರವಿ ಮ್ಯಾಗೇರಿ, ಸಚಿನ್ ಗದಗಿನ, ಮಹಾಂತೇಶ ಮುರಾಳ, ಬಸು ಗೋನಾಳ, ಸುರೇಶ ಮಸ್ಕಿ, ಅನಿಲ ಮಸ್ಕಿ, ಪರಾಜ್ ಲೈನ್, ಶಿವುಕುಮಾರ ಪೂಜಾರಿ, ಪ್ರಮೋದ ಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net