ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಿ

27 hnd 2
Published on

ಹುನಗುಂದ: ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಹೋರಾಟ ಸಮಿತಿ ಇಳಕಲ್ಲ, ಹುನಗುಂದ ಘಟಕದಿಂದ ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ದೈಹಿಕ ಶಿಕ್ಷಕ ಮಹಾಂತೇಶ ಸಾಲಿಮಠ ಮಾತನಾಡಿ, 2017 ರಿಂದ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯ ಮಾಡಿದ್ದು, 6 ನೇ ತರಗತಿಯಿಂದ 8 ನೇ ತರಗತಿವರೆಗೂ 100 ಅಂಕಗಳ ಪಠ್ಯವಿರುತ್ತದೆ. 2007 ರಿಂದ ಯಾವುದೇ ನೇಮಕಾತಿ ಆಗಿರುವುದಿಲ್ಲ್ಲ. ಒಟ್ಟಾರೆಯಾಗಿ 14 ವರ್ಷಗಳಿಂದ ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಮಾಡಿರುವುದಿಲ್ಲ ಎಂದರು.

ದೈಹಿಕ ಶಿಕ್ಷಕ ಮಂಜುನಾಥ ಶೇಬನ್ನವರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಡಾ.ಎಲ್.ಆರ್.ವೈಧ್ಯನಾಥನ್ ಅವರ ವರದಿಯನ್ನು ಅನುಷ್ಠಾನ ಮಾಡಬೇಕು. ವಿದ್ಯಾರ್ಥಿಗಳ ದೈಹಿಕ ಶಿಸ್ತು ಬೆಳವಣಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ದೈಹಿಕ ಶಿಕ್ಷಣವು ಅವಶ್ಯಕವಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

ದೈಹಿಕ ಶಿಕ್ಷಕರಾದ ಮಹಾಂತೇಶ ಭಮ್ಮಸಾಗರ, ಆರ್.ಎಂ.ಕಲವಾಡ, ಜಗದೀಶ ಹೂಲಗೇರಿ, ಶರಣಪ್ಪ ಅಂಗಡಿ, ಶರಣು ತಳವಾರ, ಹುಚ್ಚೇಶ ಗುಳೇದ, ಕುಶಾಕ ಬೀಳಗಿ, ಈರಣ್ಣ ಧೂಪದ, ಪರಶುರಾಮ ವಡ್ಡರ, ಬಸವರಾಜ ಭಜಂತ್ರಿ, ಉದಯ ಪಾಟೀಲ, ಜಾರ್ ಕನಸಾವಿ, ಮಲ್ಲು ಗೋನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net