ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

HND 5-1
Published on

ಹುನಗುಂದ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹಾಗೂ ರೈತರು ದೆಹಲಿಯಲ್ಲಿ ನಡೆಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಶನಿವಾರ ವಿ.ಮ.ವೃತ್ತದಲ್ಲಿ ಕೆಲ ಸಮಯ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ನಂತರ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುಖಂಡ ಅಮರೇಶ ನಾಗೂರ ಮಾತನಾಡಿ, ಭೂ ಸುಧಾರಣೆ ಕಾಯ್ದೆ ಮೂಲಕ ಲವತ್ತಾದ ಭೂಮಿಯನ್ನು ಬಂಡವಾಳ ಶಾಯಿಗಳು ಹೆಚ್ಚಿನ ಬೆಲೆಗೆ ಖರೀದಿಸಲಿದ್ದು, ಕೃಷಿಕರು ಬಂಡವಾಳ ಶಾಹಿಗಳ ಜೀತದಾಳುಗಳಾಗುವ ಆತಂಕವಿದೆ. ಈ ಕಾಯ್ದೆಯಿಂದ ಕೃಷಿ ಉತ್ಪಾದನೆ ಮುಂದಿನ ದಿನಗಳಲ್ಲಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ ಕೃಷಿ ಕಾಯ್ದೆಗಳು ರೈತರ ಮೇಲೆ ಮರಣ ಶಾಸನವಾಗಿವೆ. ರೈತರ ಬಗ್ಗೆ ಸ್ವಲ್ಪವು ಕರುಣಿ ಇಲ್ಲದ ರಾಜಕಾರಣಿಗಳಿಗೆ ನಾಚಿಕೆಯಾಗಬೇಕೆಂದು ದೂರಿದರು.

ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಅಧ್ಯಕ್ಷ ಬಸನಗೌಡ ಪೈಲ, ರಸುಲಸಾಬ ತಹಸೀಲ್ದಾರ್, ಯಲ್ಲನಗೌಡ ದೊಡ್ಡಮನಿ, ಮಹಾಂತೇಶ ಐಹೊಳ್ಳಿ, ಗಂಗಪ್ಪ ಬೆನಕಟ್ಟಿ, ಎಂ.ವೈ.ನದಾಫ್, ಬಸವರಾಜ ತಿಮ್ಮಾಪುರ, ಬಸನಗೌಡ ತಮ್ಮಣ್ಣವರ, ಸಂಗನಗೌಡ ಗೌಡರ, ವೀರನಗೌಡ ಪಾಟೀಲ, ಬಸನಗೌಡ ದಾದ್ಮಿ, ಯಲ್ಲಪ್ಪಗೌಡ ಬೇನಾಳ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net