ಹುನಗುಂದ ಹಿರೇಹಳ್ಳ ಸ್ವಚ್ಛಗೊಳಿಸಿ

HND NEWS 29-1
Published on

ಹುನಗುಂದ: ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೇಹಳ್ಳದಲ್ಲಿನ ಅಪಾರ ಪ್ರಮಾಣದ ಮುಳ್ಳುಕಂಟಿ, ತಾಜ್ಯ ಮತ್ತು ಹೊಳು ತೆಗೆಯುವಂತೆ ಒತ್ತಾಯಿಸಿ ಓಂ ಶಾಂತಿ ನಗರದ ವಾರ್ಡ್ ನಂ-16ರ ನಿವಾಸಿಗಳು ಗ್ರೇಡ್-2 ತಹಸೀಲ್ದಾರ್ ಎಲ್.ಎನ್. ಮಲ್ಲಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಮುಖಂಡ ಮಲ್ಲಿಕಾರ್ಜುನ ಹೂಗಾರ ಮಾತನಾಡಿ, ಹಿರೇಹಳ್ಳಕ್ಕೆ ಊರಿನ ಎಲ್ಲ ಚರಂಡಿ ನೀರು ಬರುತ್ತದೆ. ನೀರು ಮುಂದೆ ಹರಿದು ಹೋಗದೆ ದುರ್ವಾಸನೆ ಬೀರುತ್ತಿದ್ದು, ಹೂಗಾರ ಲೇಔಟ್‌ನ ಓಂಶಾಂತಿ ನಗರದ ವಾರ್ಡ್ ನಂ-16ರ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಳ್ಳದಲ್ಲಿ ಮುಳ್ಳುಕಂಟಿ, ಹುಲ್ಲು ಬೆಳೆದಿದ್ದು ಪ್ಲಾಸ್ಪಿಕ್ ತಾಜ್ಯ ಹೆಚ್ಚಾಗಿದೆ. ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆ ಬಂದಾಗ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಹಳ್ಳವನ್ನು ಸ್ವಚ್ಛ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈನು ರೋಣದ, ಹನುಮಂತ ನಡುವಿನಮನಿ, ಮೌನೇಶ ಬಡಿಗೇರ, ಮಾರುತಿ ಭಾವಿಕಟ್ಟಿ, ಮೆಹಬೂಬ ಗದ್ವಾಲ್, ಸುರೇಶ ಬಿಸನಾಳ, ರಾಮಣ್ಣ ಮೂಕಿ, ಪರಸಪ್ಪ ಸಂದಿಮನಿ, ಸಾಂತಪ್ಪ ಮಸ್ಕಿ, ಯಲ್ಲಪ್ಪ ನಡುವಿನಮನಿ, ಮಹಾಂತೇಶ ಮಾದರ, ರವಿ ಮಾದರ, ಶಶಿ ಅಮರಾವತಿ, ಬಸು ಹೂಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net