104 ಮತಗಟ್ಟೆಗಳಲ್ಲಿ ಮತದಾನ

HND 26-1
Published on

ಹುನಗುಂದ: ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಡಿ.27 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ನೋಡಲ್ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹಾಗೂ ತಹಸೀಲ್ದಾರ್ ಪಿ.ಕೆ. ದೇಶಪಾಂಡೆ ತಿಳಿಸಿದ್ದಾರೆ.

ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶನಿವಾರ ಮತಪೆಟ್ಟಿಗೆ ಮತ್ತು ಸಾಮಗ್ರಿ ವಿತರಣಾ ಕಾರ್ಯದಲ್ಲಿ ಮಾತನಾಡಿ, ತಾಲೂಕಿನ 18 ಗ್ರಾಮ ಪಂಚಾಯಿತಿಗಳ ಪೈಕಿ 16 ಗ್ರಾಮ ಪಂಚಾಯಿತಿಯ 226 ಸ್ಥಾನಗಳಿಗೆ 104 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಂದು ಮತಗಟ್ಟೆಯಲ್ಲಿ ಪೊಲೀಸ್, ಪಿಆರ್‌ಒ, ಎಪಿಆರ್‌ಒ, ಪಿಒ,ಸೇರಿ 6 ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 12 ಕೆಎಸ್‌ಆರ್‌ಟಿಸಿ ಬಸ್, 8 ಮಿನಿ ಬಸ್, 1 ಜೀಪ್‌ನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಬಿಇಒ ಮಹಾದೇವ ಬೆಳ್ಳನ್ನವರ, ಕಂದಾಯ ನಿರೀಕ್ಷಕ ಈಶ್ವರ ಬಾಲಗಾಂವಿ, ಚಿದಾನಂದ ವಾಲಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಕುಂಬಾರ, ರಾಜು ಹಗ್ಗದ ಹಾಗೂ ಇತರ ಅಧಿಕಾರಿಗಳು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net