ಹುಣಸೂರು : ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿನ ತೆಕ್ಕಲಹಾಡಿಯ ಜೇನುಕುರುಬ ಸಮುದಾಯದ ಇಬ್ಬರು
ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ತೋರಿದ್ದಾರೆ. ಶಿವಣ್ಣ-ಜಾಜಿ ದಂಪತಿ ಪುತ್ರಿ ಲಕ್ಷ್ಮೀ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ.68.5 ಅಂಕ, ಹುಣಸೂರು ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ( ಶಿವಣ್ಣ- ರಾಜಮ್ಮ ದಂಪತಿ ಪುತ್ರಿ) ಶೇ.64 ಅಂಕಗಳಿಸಿ ಸಾಧನೆಗೈದಿದ್ದಾರೆ. ಆದಿವಾಸಿ ಸಮುದಾಯದ ವಿದ್ಯಾರ್ಥಿನಿಯರು ಹಾಡಿಯಲ್ಲಿ ಓದುವ ಮಕ್ಕಳಿಗೆ ಪ್ರೇರಣೆ ಆಗಿದ್ದಾರೆ. ಹಾಡಿಯಿಂದಲೇ ಕಾಲೇಜಿಗೆ ಹೋಗುತ್ತಿದ್ದ ಇಬ್ಬರೂ ಪದವಿ ವ್ಯಾಸಂಗ ಮಾಡಲು ಸಂಕಲ್ಪ ಮಾಡಿದ್ದಾರೆ.