ಸಫಾಯಿ ಕರ್ಮಚಾರಿಗಳ ಮಾಹಿತಿ ಸಂಗ್ರಹ

HUN-SEP-2-5(MANUAL SCAVENGERS)
Published on

ಹುಣಸೂರು : ಸಫಾಯಿ ಕರ್ಮಚಾರಿಗಳ ಆಯೋಗದಿಂದ ನಿಯುಕ್ತಿಗೊಂಡ ಗಣತಿದಾರರು ಹುಣಸೂರು ಉಪ ವಿಭಾಗವ್ಯಾಪ್ತಿಯ ತಾಲೂಕುಗಳ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ ಮಾಹಿತಿ ಸಂಗ್ರಹಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣತಿ ಪರಿಶೀಲಿಸಿದರು. ಎರಡು ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ನೀಡಿದ್ದ 40 ಸಾವಿರ ರೂ.ಗಳ ಸಹಾಯಧನ ಅನುಕೂಲಕರವಾಗಿದೆಯೇ, ಇದೀಗ ಮತ್ತೆ ಅವಶ್ಯಕತೆ ಇದೆಯೇ ಎನ್ನುವ ಕುರಿತು ಮಾಹಿತಿ ಕಲೆಹಾಕಿದರು.

ಸಫಾಯಿ ಕರ್ಮಚಾರಿಗಳ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಪರಿಸ್ಥಿತಿ, ಉದ್ಯೋಗ, ವೃತ್ತಿಗಳ ಕುರಿತು ಮಾಹಿತಿ ಕಲೆಹಾಕಿ, ತರಬೇತಿಗಳ ಅವಶ್ಯಕತೆಯಿದೆಯೇ ಎನ್ನುವ ಬಗ್ಗೆ ಕರ್ಮಚಾರಿಗಳಿಂದಲೇ

ಮಾಹಿತಿ ಪಡೆದುಕೊಂಡರು. ಆಧಾರ್ ಕಾರ್ಡ್, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗುರುತಿನ ಚೀಟಿ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ದಾಖಲಾತಿಗಳ ಪರಿಶೀಲನೆ, ತಿದ್ದುಪಡಿ, ಬ್ಯಾಂಕ್ ಖಾತೆ ಚಾಲ್ತಿ ಮುಂತಾದ ಸೌಲಭ್ಯಗಳನ್ನು ಸ್ಥಳದಲ್ಲೇ ಒದಗಿಸಿ ನೀಡಲಾಯಿತು.

ಈ ವೇಳೆ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಈ ಹಿಂದೆ 2018 ರಲ್ಲಿ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 1,016 ಜನ ಮತ್ತು ನಗರ ಪ್ರದೇಶದಲ್ಲಿ 365 ಜನರನ್ನು ಗುರುತಿಸಲಾಗಿತ್ತು. ಈ ವರ್ಷದಲ್ಲಿ ಪ್ರತ್ಯೇಕ ಬಜೆಟ್ ಮಾಡಲು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ಕುಟುಂಬಗಳಿಗೆ ಆರ್ಥಿಕವಾಗಿ ಸೌಲಭ್ಯಗಳನ್ನು ಒದಸುವ ಉದ್ದೇಶ ಹೊಂದಲಾಗಿದೆ ಎಂದರು.

ಪಿ.ಎಂ ಬಿಮಾ ಯೋಜನೆ: ಈ ಸಂದರ್ಭದಲ್ಲಿ ಹುಣಸೂರುಉಪವಿಭಾಗ ವ್ಯಾಪ್ತಿಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ,ಕೋಟೆ ಮತ್ತು ಸರಗೂರು ತಾಲೂಕಿನ 250ಕ್ಕೂ ಹೆಚ್ಚು ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಪಿ.ಎಂ. ಬಿಮಾ ಯೋಜನೆಯಡಿ ಆರೋಗ್ಯ ಇನ್ನಿತರ ವಿಮೆಗಳನ್ನು ಮಾಡಿ ಕೊಡಲಾಯಿತು.

ಜಿಲ್ಲಾ ಸಫಾಯಿ ಕರ್ಮಚಾರಿ ಆಯೋಗ ಸಮಿತಿ ಸದಸ್ಯ ಎಸ್.ಮಂಜುನಾಥ, ಎನ್.ಪುಷ್ಪಲತಾ, ನಂಜುಂಡ, ಪಿಡಿಒ ರಾಮಣ್ಣ, ಔಟ್ ರೀಚ್‌ಸಂಸ್ಥೆಯ ಜಿ.ಎಸ್.ಜಗದೀಶ, ಲೋಕೇಶ, ಶಶಿಕುಮಾರ್, ಮಹದೇವ್, ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಇತರರು ಹಾಜರಿದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net