

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ವಿಜಯವಿಠಲ ದೇಗುಲದ ಮುಂಭಾಗ ಬುಧವಾರ ಸಂಜೆ ಕರಡಿ ಕಾಣಿಸಿಕೊಂಡಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಕರಡಿ ಓಡಾಡಿರುವ ದೃಶ್ಯವನ್ನು ಸ್ಥಳಿಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.
ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಆತಂಕ ಮೂಡಿಸಿದೆ.
ಈ ಭಾಗದ ಕೃಷಿ ಕೂಲಿಕಾರ್ಮಿಕರು, ರೈತರು ಅಂಗೈಯಲ್ಲೇ ಜೀವ ಹಿಡಿದು ಹಂಪಿ ಪ್ರದೇಶದ ಜಮೀನುಗಳಿಗೆ ತೆರಳಬೇಕಿದೆ. ಅರಣ್ಯ ಇಲಾಖೆ ಕರಡಿ ಸೆರೆಗೆ ಕಾಳಜಿ ವಹಿಸಿಲ್ಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.