

ಶ್ರವಣ್‌ಕುಮಾರ್ ನಾಳ, ಮಂಗಳೂರು
ಮಂಗಳೂರಿನ ಪ್ರಮುಖ ಕೇಂದ್ರಸ್ಥಳವಾಗಿರುವ ಹಂಪನ್‌ಕಟ್ಟೆ ಪ್ರದೇಶ ಇನ್ನು ಕೆಲವೇ ದಿನಗಳಲ್ಲಿ ಸೌಂಡ್‌ಲೆಸ್ zone ಆಗಿ ಪರಿವರ್ತನೆಗೊಳ್ಳಲಿದೆ.
ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿರುವ ದ.ಕ ಜಿಲ್ಲಾ ಆಸ್ಪತ್ರೆಯಾಗಿರುವ ವೆನ್ಲಾಕ್ ಆಸ್ಪತ್ರೆ, ಲೇಡಿಗೋಷನ್, ಪ್ರಮುಖ ಪ್ರಾರ್ಥನಾ ಮಂದಿರವಾದ ಮಿಲಾಗ್ರೀಸ್ ಚರ್ಚ್, ವಿವಿ ಕಾಲೇಜು, ಮಿಲಾಗ್ರೀಸ್ ವಿದ್ಯಾಸಂಸ್ಥೆಯಿರುವ ಪ್ರದೇಶದಲ್ಲಿ ಶಬ್ದಮಾಲಿನ್ಯ ತಡೆಗೆ ಪಾಲಿಕೆಯಿಂದ ಜಿಲ್ಲಾಡಳಿತಕ್ಕೆ ಹೊಸ ಪ್ರಸ್ತಾವಣೆಯನ್ನಿರಿಸಿದೆ. ಈ ಪ್ರಸ್ತಾವಣೆ ಜಾರಿಗೊಂಡರೆ ಹಂಪನ್‌ಕಟ್ಟೆ ವ್ಯಾಪ್ತಿಯು ಜಿಲ್ಲೆಯ ಮೊದಲ ಸೌಂಡ್‌ಲೆಸ್ zone ಆಗಲಿದೆ.
*ವಾಹನದ ಶಬ್ದವೇ ಕಿರಿಕಿರಿ
ವೆನ್ಲಾಕ್‌ಗೆ ಶಬ್ದ ಮಾಲಿನ್ಯದ ಕಿರಿಕಿರಿ ಇರುವುದರಿಂದ ಜಿಲ್ಲಾಡಳಿತಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದೆ. ಇಲ್ಲಿ ಚಿಕಿತ್ಸೆ ಪಡೆಯುವ ಶೇ.75ರಷ್ಟು ರೋಗಿಗಳಿಗೆ ವಾಹನದ ಶಬ್ದವೇ ಕಿರಿಕಿರಿ ಎಂಬ ಫೀಡ್‌ಬ್ಯಾಕ್ ಬಂದ ಕಾರಣ ಶಬ್ದ ಮಾಲಿನ್ಯ ನಿಯಂತ್ರಿಸಲು ಸ್ಮಾರ್ಟ್ ಸಿಟಿಗೆ ಈ ಹಿಂದೆ ಜಿಲ್ಲಾಡಳಿದಿಂದ ಹೊಸ ಪ್ರಸ್ತಾವಣೆಯೊಂದು ಸಲ್ಲಿಕೆಯಾಗಿತ್ತು. ಹಂಪನಕಟ್ಟೆ ಕೇಂದ್ರವಾಗಿ ಸ್ಟೇಟ್ ಬ್ಯಾಂಕ್ ಕಡೆಗೆ, ಪಿವಿಎಸ್, ಬಾವುಟಗುಡ್ಡೆ, ಮಿಲಾಗ್ರಿಸ್, ಅತ್ತಾವರ, ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಿದ್ದು, ಈ ಕೇಂದ್ರ ಭಾಗದಲ್ಲೇ ವೆನ್ಲಾಕ್ ಆಸ್ಪತ್ರೆ ಇದೆ. ವೆನ್ಲಾಕ್ ಆಸ್ಪತ್ರೆಯನ್ನೇ ವಿಭಾಗಿಸಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಜಾಸ್ತಿ. ಸೆಂಟ್ರಲ್ ರೈಲು ನಿಲ್ದಾಣ ತೆರಳಲು 5 ಪ್ರಮುಖ ರಸ್ತೆಯಿದ್ದು, ವೆನ್ಲಾಕ್-ರೈಲ್ವೆ ಸ್ಟೇಷನ್ ರಸ್ತೆಯ ಸಂಚಾರಕ್ಕೆ ನಿಬರ್ಂಧಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದಕ್ಕೆ ಪೂರಕವಾಗಿ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕಿಸುವ ಇತರೆ ರಸ್ತೆಯನ್ನು ಅಭಿವೃದ್ದಿಪಡಿಸುವ ಹಾಗೂ ಪರ್ಯಾಯ ರಸ್ತೆ ಅಭಿವೃದ್ಧಿಗೆ ಪೂರಕ ಪ್ರಸ್ತಾವಣೆಯನ್ನು ಸ್ಮಾರ್ಟ್‌ಸಿಟಿ ಸಿದ್ದಪಡಿಸಿದೆ. ಸಧ್ಯಕ್ಕೆ ಈ ಎರಡೂ ಪ್ರಸ್ತಾವಣೆಗಳನ್ನು ಸಾರ್ವಜನಿಕ ಸಂಚಾರ ದೃಷ್ಠಿಯಿಂದ ಕೈಬಿಡಲಾಗಿದೆ.
--------------
ಸೌಂಡ್‌ಲೆಸ್ zone
ಇದು ವೆನ್ಲಾಕ್ 1000 ಹಾಸಿಗೆಯುಳ್ಳು ಜಿಲ್ಲೆಯ ಏಕೈಕ ಆಸ್ಪತ್ರೆಯಾಗಿದ್ದು, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿಯೂ ಬಳಕೆಯಾಗುತ್ತಿದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಕೋವಿಡ್-19 ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿತ್ತು. ಇಲ್ಲಿನ ರೋಗಿಗಳಿಗೆ ಪ್ರತಿನಿತ್ಯ ವಾಹನಗಳ ಶಬ್ದವೇ ಕಿರಿಕಿರಿ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗಂತೂ ನಿತ್ಯ ಕಿರಿಕಿಯಾಗುತ್ತಿದ್ದರೂ ಹೇಳಲಾಗದ ಸ್ಥಿತಿ ಎದುರಾಗಿದೆ. ಅತ್ತಾವರ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ವಿವಿ ಕಾಲೇಜು, ಹಂಪನಕಟ್ಟೆ ರಸ್ತೆ ವೆನ್ಲಾಕ್ ಸುತ್ತುವರಿದಿದ್ದು, ಇಲ್ಲಿ ಶಬ್ದ ಮಾಲಿನ್ಯದ ಕಿರಿಕಿರಿ ನಿರಂತರ. ಪ್ರಮುಖ ಪ್ರಾರ್ಥನಾ ಮಂದಿರವಾದ ಮಿಲಾಗ್ರೀಸ್ ಚರ್ಚ್‌ನ ಭಕ್ತರಿಗೂ ಇಲ್ಲಿ ನಿರಂತರ ಕಿರಿಕಿರಿ. ಈ ವ್ಯಾಪ್ತಿಯಲ್ಲಿ ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಲಿಸಲು ಸದ್ಯಕ್ಕಂತೂ ಅಸಾಧ್ಯವಾಗಿದ್ದು, ಜಿಲ್ಲಾಡಳಿತ, ಸ್ಮಾರ್ಟ್‌ಸಿಟಿ, ಪಾಲಿಕೆಯಿಂದ ಈಬಗ್ಗೆ ಹಲವು ಯೋಜನಾ ಪ್ರಸ್ತಾವಣೆಗಳು ಸರ್ಕರದ ಮಟ್ಟದಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಹಂಪನ್‌ಕಟ್ಟೆ ಪ್ರದೇಶವನ್ನು ಸೌಂಡ್‌ಲೆಸ್ ರೆನ್ ಆಗಿ ಪರಿವರ್ತಿಸುವ ಪಾಲಿಕೆಕೆಯ ಪ್ರಸ್ತಾವಣೆ ಸಧ್ಯಕ್ಕೆ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ.
--------------
ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುವ ಶೇ.75ರಷ್ಟು ರೋಗಿಗಳಿಗೆ ವಾಹನದ ಶಬ್ದವೇ ಕಿರಿಕಿರಿ ಎಂಬ ಫೀಡ್‌ಬ್ಯಾಕ್ ಬಂದ ಕಾರಣ ಶಬ್ದ ಮಾಲಿನ್ಯ ನಿಯಂತ್ರಿಸಲು ಸ್ಮಾರ್ಟ್ ಸಿಟಿಗೆ ಈ ಹಿಂದೆ ಪ್ರಸ್ತಾವಣೆಯೊಂದು ಸಲ್ಲಿಕೆಯಾಗಿತ್ತು. ಇದಕ್ಕೆ ಪರ್ಯಯವಾಗಿ ಆಸ್ಪತ್ರೆ, ಪ್ರಾರ್ಥನಾ ಮಂದಿರ, ವಿದ್ಯಾಸಂಸ್ಥೆಯಿರುವ ಪ್ರದೇಶದಲ್ಲಿ ಶಬ್ದಮಾಲಿನ್ಯ ತಡೆಗೆ ಹಂಪನ್‌ಕಟ್ಟೆಯ ಇಂತಿಷ್ಟು ಪ್ರದೇಶವನ್ನು ಸೌಂಡ್‌ಲೆಸ್ zone ಆಗಿ ಪತಿವರ್ತಿಸುವುದರಿಂದ ಶಬ್ದಮಾಲಿನ್ಯ ತಡೆಯಬಹುದು.
-ಮನೋಜ್ ಕುಮಾರ್ ಕೋಡಿಕಲ್, ಮೇಯರ್
ಮಂಗಳೂರು ಮಹಾನಗರ ಪಾಲಿಕೆ
--------------
ಹಂಪನಕಟ್ಟೆ ವ್ಯಾಪ್ತಿಯಲ್ಲಿ ಪ್ರಮುಖ ಆಸ್ಪತ್ರೆ, ಪ್ರಾರ್ಥನಾ ಮಂದಿರ, ವಿದ್ಯಾಸಂಸ್ಥೆಗಳಿಗೆ ವಾಹನಗಳಿಂದ ಕಿರಿಕಿರಿ ಸಹಜ. ಆದರೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಈ ಪ್ರದೇಶವನ್ನು ಸೌಂಡ್‌ಲೆಸ್ ರೆನ್ ಆಗಿ ಪರಿವರ್ತಿಸಿದರೆ ಸಧ್ಯವಾದಷ್ಟು ಶಬ್ದಮಾಲಿನ್ಯ ಕಡಿಮೆ ಮಾಡಬಹುದು. ಈಬಗ್ಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು.
-ವೇದವ್ಯಾಸ ಕಾಮತ್, ಶಾಸಕರು