ಯಾಂತ್ರಿಕ ಜೀವನದಿಂದ ಹೊರಬರಲು ಹಾಸ್ಯ ಅಗತ್ಯ

22 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳೆಯರು ತಮ್ಮ ಯಾಂತ್ರಿಕೃತ ಬದುಕಿನ ಏಕತಾನತೆಯಿಂದ ಹೊರಬರಲು ಹಾಸ್ಯ ಅವಶ್ಯಕ ಎಂದು ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಪಟ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಜಾಗೃತಿ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಹಿಳೆ ಮತ್ತು ಹಾಸ್ಯ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಇಂದಿನ ಜಾಗೃತ ಮಹಿಳೆ ಧೈರ್ಯ, ಸ್ವಾಭಿಮಾನ, ಸ್ವಾವಲಂಬನೆ, ಇತರ ಗುಣಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.

ಇದಕ್ಕೂ ಪೂರ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಏರ್ಪಡಿಸಿದ್ದ ನಾ ಮೆಚ್ಚಿದ ಮಹಿಳಾ ಸಾಧಕಿ ವಿಷಯದ ಮೇಲಿನ ಭಾಷಣ ಸ್ಪರ್ಧೆಯಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇಷಭೂಷಣ ಸ್ಪರ್ಧೆಯಲ್ಲಿ 20 ಮಹಿಳೆಯರು ಭಾಗವಹಿಸಿದ್ದರು. ಡಾ. ಅರುಣಾ ಹಳ್ಳಿಕೇರಿ, ಮಂಗಳಾ ಚಿಗಟೇರಿ ನಿರ್ಣಾಯಕರಾಗಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಡಾ. ವಿ ಶಾರದಾ, ಸವಿತಾ ಕುಸುಗಲ್ಲ, ಸುಜಾತ ಹಡಗಲಿ, ವಿಜಯಾ ಲಿಂಬಣ್ಣದೇವರಮಠ, ಭಾಗ್ಯ ನಡಕಟ್ಟಿ, ಜ್ಯೋತಿ ಭಾವಿಕಟ್ಟಿ, ರೇಖಾ ಅಂತಕ್ಕನವರ, ಗಂಗವ್ವ ಕೋಟಿಗೌಡರ, ಇತರರು ಇದ್ದರು.

ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಾರದಾ ಕೌದಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net