ಹಾಸ್ಯಕ್ಕೆ ಮನಸ್ಸುಗಳನ್ನು ಬೆಸೆಯುವ ಶಕ್ತಿ, ಸಂವಾದದಲ್ಲಿ ಲೇಖಕಿ ಡಾ.ಭುವನೇಶ್ವರಿ ಹೆಗಡೆ ಅಭಿಮತ

kavi
ಸುರತ್ಕಲ್‌ನ ಕಡಲ ಕಿನಾರೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಡಾ.ಮೀನಾಕ್ಷಿ ರಾಮಚಂದ್ರ, ಚೂಂತಾರು ಸರೋಜಿನಿ ಭಟ್ ಪರಿಷತ್ತಿನ ಡಾ.ಮುರಲಿ ಮೋಹನ ಚೂಂತಾರು, ರಘು ಇಡ್ಕಿದು ಮೊದಲಾದವರು ಭಾಗವಹಿಸಿದ್ದರು.
Published on

ಮಂಗಳೂರು: ಹಾಸ್ಯ ಮನಸ್ಸುಗಳನ್ನು ಬೆಸೆಯುವುದರೊಂದಿಗೆ, ನೋವುಗಳನ್ನು ಮರೆಸುವ ದಿವ್ಯೌಷದವೂ ಹೌದು. ಮಂಗಳೂರಿನ ಜನ ನನ್ನ ಹಾಸ್ಯ ಬರಹಗಳನ್ನು ಸ್ವೀಕರಿಸಿ, ತುಂಬು ಪ್ರೀತಿ ನೀಡಿದ್ದಾರೆ ಎಂದು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದರು.

ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದೊಂದಿಗೆ ಶನಿವಾರ ಸುರತ್ಕಲ್ ಕಡಲ ಕಿನಾರೆಯಲ್ಲಿ ಆಯೋಜಿಸಿದ ವರ್ಷವೈಭವ, ಸಂವಾದ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಮೀನಾಕ್ಷಿ ರಾಮಚಂದ್ರ ಸಂವಾದಕಾರರಾಗಿದ್ದರು. ಸಾಹಿತಿ ಕೇಶವ ಕುಡ್ಲ, ಗಣೇಶ ಪ್ರಸಾದ ಜಿ ಮೊದಲಾದವರು ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಅಧ್ಯಕ್ಷ ಮಂಜುನಾಥ ಎಸ್.ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಗಣೇಶ ಪ್ರಸಾದ್ ಉಪಸ್ಥಿತರಿದ್ದರು. ಕವಿಗಳಾದ ಎಸ್.ಕೆ.ಗೋಪಾಲಕೃಷ್ಣ ಭಟ್, ಬದ್ರುದ್ದೀನ್ ಕೂಳೂರು, ರಘು ಇಡ್ಕಿದು, ಸಾವಿತ್ರಿ ರಮೇಶ್ ಭಟ್, ರವಿರಾಜ್, ಸುಬ್ರಾಯ ಭಟ್, ರೇಖಾ ಶಂಕರ್, ಗಣೇಶ್ ಪ್ರಸಾದ್ ಜಿ, ಡಾ.ಮೀನಾಕ್ಷಿ ರಾಮಚಂದ್ರ ಕವನ ವಾಚಿಸಿದರು. ಚೂಂತಾರು ಸರೋಜಿನಿ ಭಟ್ ಪರಿಷತ್ತಿನ ಡಾ.ಮುರಲಿ ಮೋಹನ ಚೂಂತಾರು ಸ್ವಾಗತಿಸಿದರು. ಪದಾಧಿಕಾರಿ ರಘು ಇಡ್ಕಿದು ಪರಿಚಯಿಸಿದರು. ಕಾರ್ಯದರ್ಶಿ ಗಣೇಶ ಪ್ರಸಾದ್ ಹಾಗೂ ಪದಾಧಿಕಾರಿ ರತ್ನಾವತಿ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net