ಹಾಸ್ಯ ಕಲಾವಿದರಿಗೆ ದ್ವಾರಕೀಶ್ ಸ್ಫೂರ್ತಿ

07 ಸಿರಿಗೇರಿ 01
ಸಿರಿಗೇರಿಯಲ್ಲಿ ದ್ವಾರಕೀಶ್ ಒಂದು ನೆನಪು ಕಾರ್ಯಕ್ರಮ ಭಾನುವಾರ ನಡೆಯಿತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ , ಉಪಾಧ್ಯಕ್ಷೆ ರಾಜಮ್ಮ, ಉಪನ್ಯಾಸಕ ಬಕಾಡೆ ಪಂಪಾಪತಿ, ಪ್ರಮುಖರಾದ ಗೋಡೆ ಸಂಪತ್, ಸಿ.ಎಂ ಬಸಯ್ಯಸ್ವಾಮಿ, ರಾಚೋಟ್ಟಯ್ಯ ಸ್ವಾಮಿ, ಕೆ.ಎಂ.ದೇವರಾಜಯ್ಯ ಸ್ವಾಮಿ, ಎಚ್.ಎಂ.ಶಶಿಧರ ಇದ್ದರು.
Published on

ಸಿರಿಗೇರಿ: ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಹಲವಾರು ಕಲಾವಿದರನ್ನು ಪರಿಚಯಿಸಿದ್ದು ಉತ್ತಮ ಹಾಸ್ಯನಟ, ನಟ, ನಿರ್ದೇಶಕರಾಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧುಕೋಕಿಲ ಹೇಳಿದರು.

ಶ್ರೀ ನಾಗನಾಥೇಶ್ವರ ಮತ್ತು ಸಿರಿಗೇರಮ್ಮ ದೇವಿ ರಥೋತ್ಸವದ ಅಂಗವಾಗಿ ಭಾನುವಾರ ಅನ್ನಪೂರ್ಣ ಕ್ರಿಯೇಷನ್ಸ್ ಆಯೋಜಿಸಿದ್ದ ದ್ವಾರಕೀಶ್ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿ ನಟ ಕಿಶೋರ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದರು. ಡಾ.ರಾಜ್ ಕುಮಾರ ನಟಿಸಿದ ಮೇಯರ್ ಮುತ್ತಣ ಎಂಬ ಚಿತ್ರದ ಸಮಯದಲ್ಲಿ ದ್ವಾರಕೀಶ್ ಪಾತ್ರ ಬಹುಮುಖ್ಯವಾದುದು. ಅವರ ಅಮೋಘ ಅಭಿನಯ ಈಗಿನ ಯುವ ಹಾಸ್ಯ ಕಲಾವಿದರಿಗೆ ಸ್ಫೂರ್ತಿ, ಇಂತಹ ವ್ಯಕ್ತಿಗಳ ಗರಡಿಯಲ್ಲಿ ನಾವೆಲ್ಲ ಬೆಳೆದವರು ಎಂದರು.

ಗಾಯಕರಾದ ರಾಧಕೃಷ್ಣ, ಹೆಣ್ಣಿನ ಧ್ವನಿ ಮತ್ತು ಗಂಡಿನ ಧ್ವನಿಯಲ್ಲಿ ದ್ವಾರಕೀಶ್ ರವರ ನೆನಪಿಗಾಗಿ ಹಾಡುಗಳನ್ನು ಹಾಡಿ ಸಾರ್ವಜನಿಕರನ್ನು ರಂಜಿಸಿದರು. ಸ್ವರ ಝೇಂಕಾರ ತಂಡದದಿಂದ ಹಾಡುಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net