

ದೇವದುರ್ಗ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಆಧ್ಯಾತ್ಮಿಕ ಬದುಕಿನ ಮಹಾನ್ ಚೇತನರಾಗಿದ್ದು, ಅವರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಇದನ್ನೂ ಓದಿ: ಸಿದ್ಧರಾಮೇಶ್ವರ ಭಾವಚಿತ್ರ, 12 ಮಠಾಧೀಶರ ಭವ್ಯ ಮೆರವಣಿಗೆ
ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶ್ರೀ ಸಿದ್ಧ್ದರಾಮೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ ದೇವರ ಭಕ್ತರು. ಪರಿಶುದ್ಧ ಜೀವನ ಮತ್ತು ಆತ್ಮ ಸಾಕ್ಷಾತ್ಕಾರಕ್ಕೆ ಧಾರ್ಮಿಕ ಚಿಂತನೆಗಳು ಅಗತ್ಯ ಎಂದು ಸಾರಿದ್ದಾರೆ. ಇವರ ಜೀವನ ಚರಿತ್ರೆ ಕುರಿತು 68 ಶಾಸನಗಳು ನಮ್ಮ ನಾಡಿನಲ್ಲಿ ದೊರೆತಿವೆ.
ಸೊಲ್ಲಾಪುರದಲ್ಲಿ ದೇವಸ್ಥಾನವಿದೆ. ಜನಕಲ್ಯಾಣಕ್ಕೆ ಆದ್ಯತೆ ನೀಡಿದ ಸಿದ್ಧರಾಮೇಶ್ವರ ಕೆರೆ-ಕಟ್ಟೆಗಳನ್ನು ನಿರ್ಮಿಸಿ ಮನುಕುಲದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಸಂಘಟನಾ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ, ಚುಟುಕ ಸಾಹಿತ್ಯ ಪರಿಷತ್ ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ್ ಬ್ಯಾಗವಾಟ್, ನೌಕರರಾದ ಭೀಮರಾಯ ನಾಯಕ ಮೇಟಿ, ಶರಣಯ್ಯ ಸ್ವಾಮಿ, ಪ್ರವೀಣ್ ಕುಮಾರ್, ಶಾಂತಮಲ್ಲಯ್ಯ ಸ್ವಾಮಿ, ಫಿಲಿಪ್, ಗ್ರಾಮ ಸಹಾಯಕರಾದ ಕೃಷ್ಣ ಅಕ್ಕರಕಿ, ಪ್ರಮುಖರಾದ ರಂಗಪ್ಪ ಬಲ್ಲಿದ್ದವ್ ಕೋತಿಗುಡ್ಡ, ಮಲ್ಲಪ್ಪ ಇತರರಿದ್ದರು.