ಮನುಕುಲಕ್ಕೆ ಕನಕರ ಭಕ್ತಿ, ಪುರಂದರರ ಜೀವನ ದೃಷ್ಟಿ ಅಗತ್ಯ

New Kanaka New
Published on

ಹುಬ್ಬಳ್ಳಿ : ನಿರ್ವಾಜ್ಯ ಭಕ್ತಿ, ನಿಷ್ಕಾಮ ಸೇವೆ ಹಾಗೂ ಪರಮ ಧರ್ಮದ ಮಹತ್ವವ್ತನ್ನು ಸರಳವಾದ ಕನ್ನಡದಲ್ಲಿ ಜನಸಾಮಾನ್ಯರ ಅಂಗಳಕ್ಕೆ ತಂದುಕೊಟ್ಟ ಶ್ರೇಯಸ್ಸು ದಾಸ ಶ್ರೇಷ್ಠರಾದ ಪುರಂದರದಾಸರು ಹಾಗೂ ಕನಕದಾಸರಿಗೆ ಸಲ್ಲುತ್ತದೆ ಎಂದು ಪಂ. ವೆಂಕಟೇಶಾಚಾರ್ಯ ಜಹಗೀರದಾರ ಹೇಳಿದರು.

ಇಲ್ಲಿನ ಭವಾನಿ ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕನಕಪುರಂದರೋತ್ಸವದ ಅಂಗವಾಗಿ ಹಮ್ಮಿಕೊಂಡ ಭಜನೆ ಸಪ್ತಾಹದ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಸಮಾಜ ಸುಧಾರಣೆೆಯಾಗಬೇಕಾದಲ್ಲಿ ದಾಸರ ಕಿವಿಮಾತಿನ ಕೀರ್ತನೆಗಳನ್ನು ಕೇಳಬೇಕಲ್ಲದೇ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಲೌಕಿಕ ಬದುಕಿನಲ್ಲಿ ಶಿಸ್ತು ಹಾಗೂ ಸಂಸ್ಕಾರಯುತ ಜೀವನ ನಡೆಸಬೇಕಾದರೆ, ಸ್ವಾರ್ಥ ಬಿಟ್ಟು ದೇವರಲ್ಲಿ ಸರ್ವ ಸಮರ್ಪಣಾಭಾವ ಇಟ್ಟುಕೊಂಡಿರಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಕನಕದಾಸರ ಅಚಲವಾದ ಭಕ್ತಿ, ಪುರಂದರ ದಾಸರ ಜೀವನ ದೃಷ್ಟಿಗಳು ಇಂದು ಅನುಕರಿಸಬೇಕಿದೆ ಎಂದು ಹೇಳಿದರು.

ಮೊದಲ ದಿನ ಚಂದ್ರನಾಥ ನಗರದ ಶ್ರೀ ವೇಣುಪ್ರಿಯ ಭಜನಾ ಮಂಡಳಿಯ ಸದಸ್ಯರು ಭಜನೆ ನಡೆಸಿಕೊಟ್ಟ್ಟು. ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್. ಪರ್ವತಿ ಸ್ವಾಗತಿಸಿದರು. ಅಶ್ವಿನಿ ಬ್ಯಾಡಗಿ, ಮನೋಹರ ಪರ್ವತಿ ಹಾಗೂ ಇತರರು ಭಾಗವಹಿಸಿದ್ದರು. ಕಾರ್ಯದರ್ಶಿ ಜನಮೇಜಯ ಉಮರ್ಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net