ಮಾನವೀಯತೆ ಎಲ್ಲ ಧರ್ಮಗಳ ತಿರುಳು

22ATHANI1.jpg
Published on

ಅಥಣಿ: ಬಸವಾದಿ ಶಿವಶರಣರಂತೆ ಸತ್ಯದ ದಾರಿಯಲ್ಲಿ ನಡೆದು ನಾಡಿಗೆ ಬೆಳಕಾದವರಲ್ಲಿ ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳೂ ಒಬ್ಬರು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮರ ಬದುಕು ಬೆಳಕು ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಥಣಿ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮರ ಬದುಕು ಬೆಳಕು ಪ್ರವಚನ ಕಾರ್ಯಕ್ರಮವನ್ನು ಪೂಜ್ಯರು ಉದ್ಘಾಟಿಸಿದರು. ಶಿವಬಸವ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ವೀರೇಶ್ವರ ದೇವರು, ಶಿವಾನಂದ ದಿವಾನಮಳ ಇತರರಿದ್ದರು.
ಅಥಣಿ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮರ ಬದುಕು ಬೆಳಕು ಪ್ರವಚನ ಕಾರ್ಯಕ್ರಮವನ್ನು ಪೂಜ್ಯರು ಉದ್ಘಾಟಿಸಿದರು. ಶಿವಬಸವ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ವೀರೇಶ್ವರ ದೇವರು, ಶಿವಾನಂದ ದಿವಾನಮಳ ಇತರರಿದ್ದರು.

ಎಲ್ಲ ಧರ್ಮಗಳ ತಿರುಳು ಒಂದೇ. ಅದುವೇ ಮಾನವೀಯತೆ. 12ನೇ ಶತಮಾನದಲ್ಲೇ ಬಸವಣ್ಣ ಜಾತೀಯತೆ ಕಿತ್ತೊಗೆದು ಎಲ್ಲರೂ ಸಮಾನರೆಂದು ಸಾರಿದರು. ಅವರ ತತ್ತ್ವಗಳನ್ನು ಮುರುಘೇಂದ್ರ ಶಿವಯೋಗಿ ಅಳವಡಿಸಿಕೊಂಡು ಸಾಮಾಜಿಕ ಹೋರಾಟ ನಡೆಸಿದರು. 21 ವರ್ಷಗಳ ಕಾಲ  ಲೋಕಸಂಚಾರ ಮಾಡಿ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದರು. ಶಿವಶಕ್ತಿಯ ತಪಶಕ್ತಿಯ ಫಲದಿಂದ ಈ ನೆಲವಿಂದು ಪುಣ್ಯಕ್ಷೇತ್ರವಾಗಿದೆ ಎಂದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಮಹಾತ್ಮರ ಚಿಂತನೆ ಆಲಿಸುವುದರಿಂದ ಮನಸ್ಸಿನ ಚಿಂತೆ ದೂರವಾಗುತ್ತದೆ. ಎಲ್ಲರಿಗೂ ಒಳಿತು ಬಯಸಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಬಸವಣ್ಣ ಹೋರಾಡಿದರು. ಆರೋಗ್ಯವಂತ ಸಮಾಜಕ್ಕೆ ಅವರ ಆದರ್ಶ ಪೂರಕ ಎಂದರು. ತೆಲಸಂಗದ ವೀರೇಶ್ವರ ದೇವರು ಮಾತನಾಡಿ, ಗಚ್ಚಿನಮಠದಲ್ಲಿ ನಿರಂತರ ಆಧ್ಯಾತ್ಮಿಕ ಚಿಂತನೆಗಳು ನಡೆಯುತ್ತಿರುವುದು ಹೆಮ್ಮಯ ಸಂಗತಿ ಎಂದರು. ಪ್ರವಚನಕಾರ ಸದಾನಂದಯ್ಯ ಶಾಸ್ತ್ರಿಗಳು ಮಾತನಾಡಿ, ಗಚ್ಚಿನಮಠದ ಕಾಯಕ, ದಾಸೋಹ ತತ್ತ್ವ ಮಾದರಿ ಎಂದರು.

ತಹಸೀಲ್ದಾರ್ ರಾಜೇಶ ಬುರ್ಲಿ, ಶಿವಾನಂದ ದಿವಾನಮಳ, ಈರಣ್ಣಗೌಡ ಪಾಟೀಲ, ಸಂಗನಗೌಡ ಪಾಟೀಲ, ಮೋಹನ ಅಣೆಪ್ಪನವರ, ಮಹಾದೇವ ಹೊನ್ನಳಿ, ಅಕ್ಷಯ ಬುರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net