

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿದ್ಯೆ ಮತ್ತು ಸಂಘಟನೆಯಿಂದ ವಾತ್ರ ಸವಾಜದಲ್ಲಿರುವ ಅಸವಾನತೆ ಪಿಡುಗನ್ನು ನಿವಾರಿಸಲು ಸಾಧ್ಯ ಎಂಬುದನ್ನು ಅರಿತ ನಾರಾಯಣಗುರುಗಳು ಈ ಕುರಿತು ಸವಾಜದಲ್ಲಿ ಜಾಗೃತಿ ಮೂಡಿಸಿದರು. ಗುರುಗಳ ತತ್ವದಲ್ಲಿ ಮನುಷ್ಯತ್ವ ಇದೆ ಎಂದು ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ವಕೀಲ ಐ.ತಾರಾನಾಥ ಪೂಜಾರಿ ಹೇಳಿದರು.
ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂದ ವತಿಯಿಂದ ನಿರ್ಮಿಸಲ್ಪಟ್ಟ ಹವಾನಿಯಂತ್ರಿತ ಅಮೃತ ಸಭಾಭವನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ, ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ನಾರಾಯಣಗುರುಗಳ ಸವಾನತೆಯ ತತ್ವವೇ ಸಂವಿಧಾನದಲ್ಲಿಯೂ ಅಡಕವಾಗಿದೆ. ಅವರ ವೈಚಾರಿಕ ನಿಲುವು, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಇಂದು ಗಳಿಸಿದ ಸಂಪಾದನೆಯಲ್ಲಿ ಶೇ.40ರಷ್ಟನ್ನು ಮೂಢನಂಬಿಕೆಗಳಿಗೆ ಬಳಸುತ್ತಿರುವುದು ಆತಂಕಕಾರಿ. ಮೂಢನಂಬಿಕೆಗಳಿಗೆ ಬಳಸುವ ಹಣವನ್ನು ವಿದ್ಯೆಗೆ ಬಳಸಿ ಎಂದು ಸಲಹೆ ನೀಡಿದರು.
ಸಂದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ವಾಡಿದರು. ಸಂದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು. ಲೋಗೋ ರಚನೆ ವಾಡಿದ ರವಿ ಮೂಡುಕೊಣಾಜೆ ಅವರನ್ನು ಗೌರವಿಸಲಾಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಸುವರ್ಣ ಪ್ರತಿಷ್ಠಾನ ಕರ್ನಿರೆ ಅಧ್ಯಕ್ಷ ಪ್ರಭಾಕರ ಡಿ.ಸುವರ್ಣ, ಬಿಜೆಪಿಯ ಜಿಲ್ಲಾ ಮುಖಂಡ ಸುದರ್ಶನ ಎಂ., ಉದ್ಯಮಿ ನಾರಾಯಣ ಪಿ.ಎಂ, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಾರ್ಡ್ ಸದಸ್ಯ ರಾಜೇಶ್ ನಾಯ್ಕ ಅತಿಥಿಗಳಾಗಿದ್ದರು.
ಕೋಶಾಧಿಕಾರಿ ಜಗದೀಶ್ ಪೂಜಾರಿ ಮಿಜಾರು, ಉಪಾಧ್ಯಕ್ಷ ರವೀಂದ್ರ ಕರ್ಕೇರ, ಶ್ರೀ ನಾರಾಯಣಗುರು ಸೇವಾದಳದ ಅಧ್ಯಕ್ಷ ದಿನೇಶ್ ಪೂಜಾರಿ ವಾರೂರು, ಮಹಿಳಾ ಟಕದ ಅಧ್ಯಕ್ಷೆ ಸವಿತಾ ದಿನೇಶ್ ಮತ್ತಿತರರಿದ್ದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಕುವಾರ್ ಹಂಡೇಲು ಸ್ವಾಗತಿಸಿದರು. ಸಂಟನಾ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ ಪ್ರಸ್ತಾವನೆಗೈದರು. ರೋಹನ್ ಅತಿಕಾರಬೆಟ್ಟು, ಶ್ರೀರಾಜ್ ಸನಿಲ್, ಪ್ರಜ್ವಲ್ ನಿರೂಪಿಸಿದರು. ಉಪಾಧ್ಯಕ್ಷ ಸುಶಾಂತ್ ಕರ್ಕೇರ ವಂದಿಸಿದರು.