ಗುತ್ತಿಗಾರಿನಲ್ಲಿ ಅನಾಥ ವ್ಯಕ್ತಿಗೆ ಮಿಡಿದ ಹೃದಯಗಳು

IMG_20220716_091417
Published on

ಮಂಗಳೂರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2 ತಿಂಗಳಿನಿಂದ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಕ್ಷಾ ಯೂನಿಯನ್ ವತಿಯಿಂದ ಪಂಚಾಯತ್ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಪಂಚಾಯತಿ ಆಡಳಿತ ವರ್ಗ, ಅಧಿಕಾರಿಗಳು ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಅನಾಥ ವ್ಯಕ್ತಿಯನ್ನು ತಮಿಳುನಾಡು ಮೂಲದ ಪಳನಿ ಸ್ವಾಮಿ ಎಂದು ಗುರುತಿಸಲಾಗಿದೆ. ಆಂಬುಲೆನ್ಸ್ ಚಾಲಕರಾಗಿ ತೀರ್ಥರಾಮ ಮುಂಡೋಡಿ ಮತ್ತು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿಯವರು ಜಿಲ್ಲಾ ಆಸ್ಪತ್ರೆಗೆ ತಲುಪಿಸಿದರು.

ಪಂಚಾಯತಿ ಸದಸ್ಯ ವಿಜಯ್ ಚಾರ್ಮಾತ, ಪಂಚಾಯತ್ ಪಿ.ಡಿ.ಓ. ಧನಪತಿ, ರಿಕ್ಷಾ ಯೂನಿಯನ್ ನ ಶಶಿಧರ್ ಕುಕ್ಕುಜೆ, ಮೋಹನ್ ದಾಸ್ ಶಿರಾಜೆ, ರಾಜೇಶ್ ಉತ್ರಂಬೆ, ವಸಂತ ಚತ್ರಪ್ಪಾಡಿ, ದಯಾನಂದ ಬಾಕಿಲ ರಮೇಶ್ ಕುಂಬಾರಕೇರಿ, ಮುತ್ತಪ್ಪನ್ ಹೋಟೆಲ್ ಮಾಲಕಿ ಸರೋಜ ಸೋಮನಾಥ್, ಉದಯ್ ಬಾಕಿಲ, ಯಶ್ಚಿತಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net