

ನರಗುಂದ: ವರ್ಷಗಳು ಬರುತ್ತವೆ, ಹೋಗುತ್ತವೆ. ಆದರೆ, ಮಾನವೀಯತೆ ಇನ್ನೂ ಬಹಳ ದೂರವಿರುವಂತೆ ಭಾಸವಾಗುತ್ತಿದೆ. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಪರಮಾತ್ಮ ಅನೇಕ ಕಾರ್ಯರೂಢಿ ದಿನಚರಿ ಬರೆಯುತ್ತಾನೆ. ಆದರೆ, ಹೆಚ್ಚಿನ ಸಂಖ್ಯೆ ಮಾನವರು ಮಾನವೀಯತೆಯ ಸಂಸ್ಕಾರ ಹೊಂದಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಈಶ್ವರಿ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಹೇಳಿದರು.
ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಹೊಸ ವರ್ಷ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದ ಎಲ್ಲರ ಒಳಿತಿಗಾಗಿ ಪ್ರತಿಯೊಬ್ಬರೂ ಆಧ್ಯಾತ್ಮಿಕತೆ ಹೊಂದುವುದು ಅಗತ್ಯ. ಹೊಸ ವರ್ಷ ಸಕಾರಾತ್ಮಕ ವಿಚಾರದೊಂದಿಗೆ ಸಕಲ ಭೂಮಂಡಲಕ್ಕೆ ಒಳ್ಳೆಯದನ್ನು ಮಾಡಲಿ ಎಂದರು.
ರೂಪಾ ಗೋವೇಶ್ವರ, ಗಾಯಿತ್ರಿ ಬೇವಿನಕಟ್ಟಿ, ಜಯಶ್ರೀ ಸಾಲೂಟಗಿಮಠ, ರತ್ನಾ ಕೋರಿ, ನಿರ್ಮಲಾ ಸಾತಿಹಾಳ, ಉಮೇಶ ಸುಬೇದಾರ, ತಾನಾಜೀ ಅವತಾಡೆ, ಸತೀಶ ಬೇವಿನಕಟ್ಟಿ, ವಿ.ಎನ್. ಕೊಳ್ಳಿಯವರ, ಶಂಕರಣ್ಣ ಇಂಗಳಳ್ಳಿ, ದೇವಪ್ಪ ಬಾವಿಕಟ್ಟಿ, ವಿ.ಎಸ್. ವೀರನಗೌಡ್ರ, ಇತರರಿದ್ದರು.