

ಮಾಂಜರಿ: ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಮನಸ್ಸಿದ್ದರೆ ಮಾರ್ಗವಿದೆ ಎಂಬ ಉಕ್ತಿ ಗಮನದಲ್ಲಿಟ್ಟುಕೊಂಡು ಅಪೂರ್ವ ಸಾಧಕರಾಗಿ ರೂಪುಗೊಳ್ಳಲು ದೃಢ ಸಂಕಲ್ಪ ಮಾಡಿದರೆ ಜೀರೋದಿಂದ ಹೀರೋ ಆಗಲು ಸಾಧ್ಯವಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಚಕ್ರವರ್ತಿ 2ವೈಕೆ23 ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ ಎರಡು ಕಣ್ಣುಗಳಾಗಬೇಕು. ವಿನಯ ಎಂಬ ಬಟ್ಟೆ ತೊಟ್ಟು ಅಂತರಂಗದಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡು ಆದರ್ಶ ವ್ಯಕ್ತಿಯಾಗಿ ಕಂಗೊಳಿಸಬೇಕು. ಯಾವುದೇ ಕಾರಣಕ್ಕೂ ಮನದಲ್ಲಿ ನಿರಾಸೆ ಸುಳಿಯಬಾರದು. ಸಕಾರಾತ್ಮಕವಾಗಿ ಆಲೋಚಿಸಬೇಕು. ಸಾಧನೆಯ ಹೆದ್ದಾರಿಯಲ್ಲಿ ನಿರಾಸೆ ಸುಳಿಯಬಾರದು ಎಂದರು. ಹುಬ್ಬಳ್ಳಿಯ ದೇಶಪಾಂಡೆ ೌಂಡೇಷನ್‌ನ ಶಿವಾನಂದ ಪಾಟೀಲ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳಪ್ಪ ಉಮರಾಣೆ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು. ಪ್ರಾಚಾರ್ಯ ಎ.ಕೆ. ಪಾಟೀಲ ಸ್ವಾಗತಿಸಿ, ವಂದಿಸಿದರು.