ಬೆಂಗಳೂರಿನಲ್ಲಿ ಮಾನವೀಯತೆ ಮೆರೆದ ಪೊಲೀಸರು: ದಾರಿಯಲ್ಲಿದ್ದ ಅನಾಥ ಶವಕ್ಕೆ ಅಂತ್ಯ ಸಂಸ್ಕಾರ

dead body
Published on

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯ ಪೊಲೀಸರು ಅನಾಥವಾಗಿ ಬಿದ್ದಿದ್ದ ಶವವನ್ನು ಸಾಗಿಸಿ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಎಲೆಕ್ಟ್ರಾನಿಕ್​ ಸಿಟಿಯ ಬಳಿ ರಸ್ತೆಯಲ್ಲಿ ವಾರಸುದಾರರಿಲ್ಲದ ಅಪರಿಚಿತ ಶವ ಒಂದು ಪತ್ತೆಯಾಗಿತ್ತು. ಈ ಕುರಿತಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿ, ಪರಿಚಿತರಿಗೆ ದೇಹವನ್ನು ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದರು. ಆದರೆ ಯಾರೂ ತಾವು ಮೃತ ವ್ಯಕ್ತಿಯ ಪರಿಚಿತರು ಅಥವಾ ಸಂಬಂಧಿ ಎಂದು ಮುಂದೆ ಬಂದಿಲ್ಲ. ಹೀಗಾಗಿ ಪೊಲೀಸರೇ ಇಂದು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.

ಅಂತಿಮ ವಿಧಿ ವಿಧಾನಗಳ ಜತೆ ಅಂತ್ಯ ಸಂಸ್ಕಾರವನ್ನು ಮಾಡಲಾಗಿದ್ದು ಮಾನವೀಯತೆ ಮೆರೆದ ಪೊಲೀಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net