ವೀರಭದ್ರೇಶ್ವರ ದೇಗುಲ ಅಗ್ನಿಕುಂಡ ಮಹಾದ್ವಾರಕ್ಕೆ ಕಳಸಾರೋಹಣ

10 HBD 02
ಹುಮನಾಬಾದ್‌ನ ಶ್ರೀ ವೀರಭದ್ರೇಶ್ವರ ದೇವಾಲಯ ಅಗ್ನಿ ಕುಂಡ ಮಹಾದ್ವಾರದ ಕಳಸಾರೋಹಣಕ್ಕೆ ಮಂಗಳವಾರ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಪೂಜೆ ನೆರವೇರಿಸಿದರು. ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ಅಭಿಷೇಕ ಪಾಟೀಲ್ ಇತರರಿದ್ದರು.
Published on

ಹುಮನಾಬಾದ್: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯದ ಥೇರ್ ಮೈದಾನದಲ್ಲಿರುವ ಅಗ್ನಿ ಕುಂಡದ ಮಹಾದ್ವಾರ ಕಳಸಾರೋಹಣ ಮಂಗಳವಾರ ಪೂಜೆ ಕೈಂಕರ್ಯದೊಂದಿಗೆ ನೆರವೇರಿತು.

ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಬೆಳಗ್ಗೆ ಅಗ್ನಿಕುಂಡದಲ್ಲಿ ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಮಹಾದ್ವಾರದ ಕಳಸಾರೋಹಣಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಪೂಜೆ ನೆರವೇರಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ ಅಗಡಿ, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ಸೋಮಶೇಖರ ಬುಳ್ಳಾ, ಪ್ರಮುಖರಾದ ರೇವಣಸಿದ್ದಪ್ಪ ಪಾಟೀಲ್, ಅಕ್ಷಯ ಪಾಟೀಲ್, ಬಾಬುರಾವ ಪೋಚಂಪಳ್ಳಿ, ಬಸಪ್ಪ ಭಾವಿ, ಮಹೇಶ ಕಲ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net