ಮಾನವ ಕಲ್ಯಾಣ ಜೈನ ಧರ್ಮದ ಆದ್ಯತೆ

17BRG1
Published on

ಬೋರಗಾಂವ: ಜೈನ ಮುನಿಗಳು ಇಡಿ ಮಾನವ ಜನಾಂಗದ ಕಲ್ಯಾಣಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಜೈನ ಧರ್ಮದಲ್ಲಿ ಅಹಿಂಸೆ ಮತ್ತು ತ್ಯಾಗಕ್ಕೆ ವಿಶೇಷ ಪ್ರಾಮುಖ್ಯ ಇದೆ ಎಂದು ಮುನಿ 108 ವಿದ್ಯಾಸಾಗರಜಿ ಮಹಾರಾಜ್​ ಅಭಿಪ್ರಾಯಪಟ್ಟರು.

ಸಮೀಪದ ಶಿರಾದವಾಡದಲ್ಲಿ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಮಜ್ಜಿನೇಂದ್ರ ಪಂಚಕಲ್ಯಾಣಕ ಪ್ರತಿಷ್ಠಾ ಮಹಾಮಹೋತ್ಸವ ಮತ್ತು ವಿಶ್ವಶಾಂತಿ ಮಹಾಯಾಗದ ಅಂಗವಾಗಿ ರಾಜ್ಯಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಜೈನ ಧರ್ಮ ತ್ಯಾಗ ಮತ್ತು ಅಹಿಂಸೆಗೆ ಹೆಸರುವಾಸಿಯಾಗಿದೆ ಏಕೆಂದರೆ ಈ ಧರ್ಮದಲ್ಲಿ ದಿಗಂಬರ ಜೈನ ಮುನಿಗಳ ಶುದಟಛಿತೆ, ಶ್ರೇಷ್ಠತೆ, ಪ್ರಾಮಾಣಿಕತೆ ಮತ್ತು ತ್ಯಾಗ ಕಾಣಬಹುದು. ಏಳು ದಿನಗಳ ಪಂಚಕಲ್ಯಾಣ ಮಹಾ ಮಹೋತ್ಸವದಲ್ಲಿ, ಪ್ರಾಣಿಗಳು ಮತ್ತು ಪಗಳ ಹಿಂಸೆ ತಪ್ಪಿಸಿ ಜೈನ ಧರ್ಮದ ಪಾವಿತ್ರ್ಯ ಕಾಪಾಡಲಾಗುತ್ತದೆ. ಶಾಂತಿಸಾಗರ ಮುನಿ ಮಹಾರಾಜರ ಆದರ್ಶಗಳು, ತತ್ತ$$$್ವಗಳು ಮತ್ತು ದಿಗಂಬರ ಸಂಪ್ರದಾಯದಂತೆ ಜೈನ ಮುನಿಗಳು ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net