ಮಾನವೀಯ ಮೌಲ್ಯ ದಾರಿದೀಪ

Human values ​​are a beacon
Published on

ವಿಜಯಪುರ: ಮಹರ್ಷಿ ವಾಲ್ಮೀಕಿಯವರು ಕಾವ್ಯ ಜಗತ್ತಿಗೆ ಅಮರ ಕೃತಿ ರಾಮಾಯಣ ನೀಡಿದವರು. ಅವರು ಕೇವಲ ಕವಿ ಮಾತ್ರವಲ್ಲ, ಮಾನವೀಯ ಮೌಲ್ಯಗಳ ದಾರಿದೀಪವೂ ಆಗಿದ್ದರು ಎಂದು ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಶಿವಾನಂದ ಕೆಲೂರ ಹೇಳಿದರು.ನಗರದ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹರ್ಷಿಗಳ ಸತ್ಯ, ಧರ್ಮ ಮತ್ತು ನಿಷ್ಠೆಯ ಪಾಠವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಯಬೇಕೆಂದು ಸಲಹೆ ನೀಡಿದರು.ಗೌರವ ಸದಸ್ಯೆ ಶಿವಲೀಲಾ ಕೆಲೂರ, ಪ್ರಾಚಾರ್ಯ ಸುನೀಲ ಬಿ.ಎಂ., ಕಲ್ಯಾಣಿ ಕಾಳೆ, ಜಸ್ಮೀನ್​ ಕಂದಗಲ್ಲ, ಸುಮಂಗಲ ನಾಯ್ಕೋಡಿ, ಶಿವಾನಂದ ಸಿಂದಗಿ, ಮುನೀರಅಹಮದ್​ ಕೊತ್ನಾಳ ಮತ್ತಿತರರಿದ್ದರು.

ವಿಜಯಪುರದ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸುನೀಲ ಬಿ.ಎಂ., ಕಲ್ಯಾಣಿ ಕಾಳೆ, ಜಸ್ಮೀನ್​ ಕಂದಗಲ್ಲ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net