ಕಡಬದ ಕೊಯಿಲ ಎಂಡೋಸಲ್ಪಾನ್ ಕೇಂದ್ರಕ್ಕೆ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಯೋಗೇಶ್ ದುಬೆ ಬೇಟಿ

WhatsApp Image 2023-08-10 at 13.53.03
Published on

ಕಡಬ: ದಕ್ಷಿಣ ಕನ್ನಡ ಜಿಲೆಯಲ್ಲಿ ಅಂಗವಿಕಲರಿಗೆ ನೀಡುವತ್ತಿರುವ ಸವಲತ್ತುಗಳ ಪರಿಶೀಲನೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಯೋಗೇಶ್ ದುಬೆ ಅವರು ನಡೆಸಿದರು.

ಕೊಯಿಲ ಎಂಡೋಸಲ್ಪಾನ್ ಕೇಂದ್ರಕ್ಕೆ ಗುರುವಾರ ಬೇಟಿ ನೀಡಿದ ಅವರು ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ನಡೆಸಿದರು.

ಬುಧವಾರ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸಭೆಯನ್ನು ನಡೆಸಿ, ಅಂಗವಿಕಲರ ಯೋಜನೆಗಳ ಮತ್ತು ಅನುದಾನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು.

ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಶೋಭಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net