ಮಾನವ ಹಕ್ಕುಗಳು ಅತ್ಯಂತ ಮಹತ್ವವಾದವು

1
Published on

ಮೈಸೂರು: ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮಾನವ ಹಕ್ಕುಗಳ ಪಾತ್ರವೂ ಮುಖ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದರು.
ನಗರದ ಪುರಭವನದಲ್ಲಿ ಮಾನವ ಹಕ್ಕುಗಳ ಸೇವಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಆಚರಣೆ ಮತ್ತು ಕಸ್ತೂರಿ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ಜಗತ್ತಿನ ಎರಡು ಮಹಾಯುದ್ಧಗಳ ಪರಿಣಾಮದಿಂದ ಪ್ರಪಂಚ ಕಂಡು ಕೇಳರಿಯದಂತೆ ಕೋಟ್ಯಂತರ ಸಾವು ನೋವು ಸಂಭವಿಸಿತು. ಈ ಘಟನೆ ಮಾನವ ಕುಲವನ್ನು ತಲೆ ತಗ್ಗಿಸುವಂತೆ ಮಾಡಿತು. ಇದರಿಂದ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಮನುಷ್ಯನಿಗೆ ಘನತೆಯ ಬದುಕನ್ನು ಖಾತ್ರಿಪಡಿಸುವ ಉದ್ದೇಶದಿಂದ, ಅಪಾಯದ ಅಂಚಿನಿಂದ ಕಾಪಾಡಲು 1946ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮೂಲಕ ಯಾರೂ ಉಲ್ಲಂಘಿಸಲಾಗದಂತಹ ಹಕ್ಕುಗಳನ್ನು ನೀಡಿತು ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳಷ್ಟೇ ಮೂಲಭೂತ ಹಕ್ಕುಗಳು ಮುಖ್ಯ. ಭಾರತೀಯರಿಗೆ ಮೂಲಭೂತ ಹಕ್ಕುಗಳು ದೊರೆಯುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪಾತ್ರ ದೊಡ್ಡದು. ಪ್ರತಿಯೊಬ್ಬರಿಗೂ ಸಮಾನ ಸ್ಥಾನಮಾನ ಸಿಗಲೇಬೇಕು ಎಂಬ ಬಸವಣ್ಣನ ತತ್ವಗಳನ್ನು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರು, ದುರ್ಬಲ ವರ್ಗದವರನ್ನು ವಿಶೇಷವಾಗಿ ಗಮನದಲ್ಲಿ ಇಟ್ಟುಕೊಂಡು ಪ್ರತಿಯೊಬ್ಬ ಭಾರತೀಯರಿಗೂ ಸಮಾನ ಮೂಲಭೂತ ಹಕ್ಕುಗಳು ಸಿಗುವಂತೆ ಮಾಡುವಲ್ಲಿ ಅಂಬೇಡ್ಕರ್ ಸಾಕಷ್ಟು ಶ್ರಮಿಸಿದರು ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಮಾತನಾಡಿದರು.ಇದೇ ವೇಳೆ ಇತ್ತೀಚೆಗೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಹತರಾದ ಇಬ್ಬರು ಕರ್ನಾಟಕದ ಹುತಾತ್ಮ ಸೈನಿಕರ ತಾಯಂದರಿಗೆ ಸನ್ಮಾನ ಮಾಡಲಾಯಿತು. ಅದೇ ರೀತಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಲಯನ್ ಡಾ.ಎಸ್. ವೆಂಕಟೇಶ್, ರುಕ್ಮಿಣಿ ಚಂದ್ರನ್, ಡಾ.ಎಚ್.ರಾಘವನ್, ಬಿ.ಕೇಶವಮೂರ್ತಿ, ಮಲ್ಲಿಕಾರ್ಜುನ ರುದ್ರಪ್ಪ ಹಾಗೂ ಲಯನ್ ಆರ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಪತ್ರಕರ್ತ ಡಾ.ಎಚ್.ಎಂ. ಕೃಷ್ಣಮೂರ್ತಿ, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್, ಆರ್.ಅಶ್ವತ್, ಸಂಘಟನೆ ಪದಾಧಿಕಾರಿಗಳಾದ, ರಾಜೇಶ್, ಕುಮಾರ, ಸವಿತಾ ಶಾಸ್ತ್ರಿ, ವಿನೋದ್ ನಾಯಕ್, ಕಾರ್ತಿಕ್, ರವೀಂದ್ರ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net