ಹ್ಯೂಮನ್ ರೈಟ್ಸ್ ಕನ್ನಡ ರಾಜ್ಯೋತ್ಸವ

human rights
Published on

ಮಡಿಕೇರಿ:

ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಸಂಭ್ರಮದಿAದ ಆಚರಿಸಲಾಯಿತು. ನಗರದ ಇಂದಿರಾ ಕ್ಯಾಂಟಿನ್‌ಬಳಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್‌ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಕರ್ನಾಟಕದಲ್ಲಿ ಇರುವವರೆಗೆ ಮಾನವೀಯ ದೃಷ್ಟಿಯಿಂದ ಎಲ್ಲರೂ ಸಮಾನರು. ಯಾರು ಮೇಲು ಕೀಳು ಎಂಬ ಬೇಧ-ಭಾವವಿಲ್ಲ.

ಎಲ್ಲರೂ ಕನ್ನಡದ ಮಕ್ಕಳೇ. ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರೊಂದಿಗೆ ನಾವು ಕನ್ನಡದಲ್ಲಿ ವ್ಯವಹರಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ, ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಸಾರ್ವಜನಿಕರು, ವಿವಿಧ ಸಂಘಸAಸ್ಥೆಗಳ ಸಹಕಾರದಿಂದ ಕನ್ನಡದ ಶಾಲೆಗಳನ್ನು ದತ್ತು ಪಡೆದು ಆ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕೇವಲ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡಭಿಮಾನವನ್ನು ತೋರದೆ ಪ್ರತಿದಿನ ಕನ್ನಡದ ಬಳಕೆಯಾಗಬೇಕು ಆ ನಿಟ್ಟಿನಲ್ಲಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಗುವುದೆಂದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಪ್ರಮುಖರಾದ ವಾಸು, ಸತೀಶ್, ಆರ್.ಲಕ್ಷö್ಮಣ್, ಸಲಹೆಗಾರರಾದ ಚೌರಿರ ರಮೇಶ್, ಬ್ಲಡ್‌ಬಯ್ಯ, ಕೀರ್ತನ್ ರೈ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net