

ಕಲಘಟಗಿ: ಮನುಕುಲ ಅಭಿವೃದ್ಧಿ ಯಾಗಲು ಒಳ್ಳೆಯ ಮನಸು, ಪರಿಸರ ಮತ್ತು ಕೆರೆಗಳ ಅಭ್ಯುದಯದಿಂದ ಮಾತ್ರ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಪಟ್ಟಣದ ಹನ್ನೆರಡು ಮಠದ ಸನಿಹದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಬೆಲವಂತರ ಹಾಗೂ ತುಮರಿಕೊಪ್ಪ ಅವರ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮೂರು ನಮ್ಮ ಕೆರೆ ಹಸ್ತಾಂತರ’ ಹಾಗೂ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನ ಮಹಿಳೆಯರು ನಾಡಿನಾದ್ಯಂತ ಸ್ವಉದ್ಯೋಗ ಕಲ್ಪಿಸುವ ನಾರಿಯರಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯದ ಮಹಿಳೆಯರು ಈಗಾಗಲೇ ಸ್ವಯಂ ಉದ್ಯೋಗ ಸೃಷ್ಟಿಸಿ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಮುಂದಾಗಿದ್ದಾರೆ ಎಂದರು.
ಕಲಘಟಗಿ ಹನ್ನೆರಡುಮಠದ ಷ.ಬ್ರ.ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಿ. ಸುರೇಂದ್ರ ಕುಮಾರ, ವಸಂತ ಸುಲ್ಯಾನ, ಸಂತೋಷ ಶೆಟ್ಟಿ, ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ಪಿ.ವೈ. ಸಾವಂತ, ಸಿಪಿಐ ಶ್ರೀ ಶೈಲ ಕೌಜಲಗಿ, ಪ್ರಭಾಕರ ನಾಯಕ, ನಾಗವ್ವ ಅಂಗಡಿ, ಗೀತಾ ಬಸನಕೊಪ್ಪ, ಎಸ್.ವಿ. ಪಾಟೀಲ, ರಾಮಪ್ಪ ಕೌಲಗೇರಿ, ಸುರೇಶ ಮರಲಿಂಗಣ್ಣವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಇದ್ದರು. ಜಿಲ್ಲಾ ನಿರ್ದೇಶಕರಾದ ಪ್ರದೀಪ ಶೆಟ್ಟಿ ಹಾಗೂ ಕಲಘಟಗಿ ಯೋಜನಾಧಿಕಾರಿ ಪ್ರಶಾಂತ ಎಸ್. ಕಾರ್ಯಕ್ರಮ ನಿರ್ವಹಿಸಿದರು.