ಕಿಮ್ಸ್ ನಲ್ಲಿ ಜೀವಾಮೃತ ಉದ್ಘಾಟನೆ, ತಾಯಿ ಹಾಲು ಸಂಗ್ರಹ ಘಟಕ

IMG-20240412-WA0015.jpg
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಸಹಯೋಗದಲ್ಲಿ ಸ್ಥಾಪಿಸಲಾದ "ಜೀವಾಮೃತ' ಹ್ಯೂಮನ್ ಮಿಲ್ಕ್ ಬ್ಯಾಂಕ್ ಅನ್ನು ಶುಕ್ರವಾರ ಆರಂಭಿಸಲಾಯಿತು.

ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ನಾಸಿರ್ ಬೋರಸದವಾಲ್ ಮಾತನಾಡಿ, ತಾಯಿ ಮಗು ಆರೋಗ್ಯವಂತರಾಗಿ ಇರಬೇಕು ಎನ್ನುವ ಉದ್ದೇಶದಿಂದ ಜೀವಾಮೃತ ಸ್ಥಾಪನೆಗೆ ಸಹಕಾರ ನೀಡಲಾಗಿದೆ. ಇದು ಈ ವರ್ಷದ ಮೊದಲ ಗ್ಲೋಬಲ್ ಗ್ರಾಂಟ್ ಆಗಿದೆ. ಸಾರ್ವಜನಿಕ ಆರೋಗ್ಯ ಸಂರಕ್ಷಣೆಯಲ್ಲಿ ರೋಟರಿ ತನ್ನದೇ ಆದ ಪಾತ್ರ ವಹಿಸುತ್ತ ಬಂದಿದ್ದು, ಈ ಯೋಜನೆ ಮೂಲಕ ಕಿಮ್ಸ್ ಸಿಬ್ಬಂದಿ, ವೈದ್ಯರು ಅಗತ್ಯ ಇರುವವರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದರು.

ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ. ಮಾತನಾಡಿ, ಆಗತಾನೇ ಹುಟ್ಟಿದ ಮಗುವಿಗೆ ಪರಿಶುದ್ಧ ಹಾಲು ಇದರಿಂದ ದೊರೆಯಲಿದೆ. ಮಗು ಆರೋಗ್ಯವಂತ ಬೆಳೆಯಲು ಇದು ಸಹಾಯ ಮಾಡುತ್ತದೆ ಎಂದರು.

ರೋಟರಿ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ವೆಂಕಟೇಶ ದೇಶಪಾಂಡೆ ಮಾತನಾಡಿ, ಕಾರಣಾಂತರಗಳಿಂದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆ ಒಂದು ವರ್ಷ ತಡವಾಗಿದೆ. ಇದೀಗ ಈ ಯೋಜನೆಗೆ 46ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಜೀವಾಮೃತ ಎಂದು ಹೆಸರಿಸಿರುವುದು ಅತ್ಯಂತ ಯೋಗ್ಯವಾಗಿದೆ. ಬೆಂಗಳೂರು ನಂತರ ಈ ಯೋಜನೆ ಹುಬ್ಬಳ್ಳಿಯಲ್ಲಿ ಆರಂಭಗೊಂಡಿದೆ. ಕಿಮ್ಸ್ ವೈದ್ಯರು ಮತ್ತು ಸಿಬ್ಬಂದಿ ಇದನ್ನು ಉತ್ತಮವಾಗಿ ಬಳಸಿಕೊಂಡು ಸಮಾಜದ ಸೇವೆ ಮಾಡಬೇಕು ಎಂದು ಮನವಿ ಮಾಡಿದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಸಂ& ಸಂಸ್ಥೆಗಳ ಸಹಕಾರದಿಂದ ಅನೇಕ ಸೌಲಭ್ಯಗಳನ್ನು ಕಿಮ್ಸ್ಗೆ ನೀಡಲಾಗಿದೆ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಾಗಲು ಸಾಧ್ಯವಿಲ್ಲ. ರೋಟರಿ ಸಂಸ್ಥೆಯವರು ನೀಡಿದ ಜೀವಾಮೃತ ಟಕವನ್ನು ಅತ್ಯಂತ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ ರಟಗೇರಿ ಮಾತನಾಡಿ, ಕಿಮ್ಸ್ ನಲ್ಲಿ ಅವಧಿಪೂರ್ವ ಜನಿಸುವ ಪ್ರತಿ ಮಗು ತಾಯಿಯ ಎದೆ ಹಾಲು ಪಡೆಯಬಹುದು. ಜೀವಾಮೃತದ ಸೌಲಭ್ಯ ಅವರಿಗೆ ಲಭ್ಯವಾಗಲಿದೆ ಎಂದರು.

ಯೋಜನಾ ಸಂಯೋಜಕ ಡಾ. ಪ್ರಕಾಶ ವಾರಿ, ಕಿಮ್ಸ್ನಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಶೇ.5ಕ್ಕೆ ತಗ್ಗಿಸಲಾಗಿದೆ. ಹಲವು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಜೀವಾಮೃತ ಟಕ ಬಂದಿರುವುದರಿಂದ ಮರಣ ಪ್ರಮಾಣ ಇನ್ನಷ್ಟು ಕಡಿಮೆ ಮಾಡಬಹುದು ಎಂದರು.

ರೋಟರಿ ಸಂಸ್ಥೆಯ ಸುರೇಂದ್ರ ಪೋರವಾಲ, ಇತರರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷ ಡಾ. ರಾಜು ದೊಡ್ಡಮನಿ ಸ್ವಾಗತಿಸಿದರು. ಕ್ಲಬ್ನ ವಾಸುಕಿ ಸಂಜಿ ಅತಿಥಿಗಳ ಪರಿಚಯ ಮಾಡಿದರು. ಡಾ. ಕಿರ್ತನಾ, ಡಾ. ಸೌರವ ಕಾರ್ಯಕ್ರಮ ನಿರೂಪಿಸಿದರು. ಸುಶೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net