ಪರಿಸರ ಇಲ್ಲದೆ ಮನುಷ್ಯನ ಬದುಕು ಅಸಾಧ್ಯ

nrp 3 (2)
Published on

ಎನ್.ಆರ್.ಪುರ: ಮನುಷ್ಯ ಇಲ್ಲದಿದ್ದರೂ ಪರಿಸರ ಇರುತ್ತದೆ. ಆದರೆ ಪರಿಸರವಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಪ್ರಾಚಾರ್ಯೆ ಸಿಸ್ಟರ್ ಶುಭಾ ಹೇಳಿದರು. ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಪ್ರಕೃತಿಯ ಮಡಿಲು ದೇವರು ಕೊಟ್ಟ ವರವಾಗಿದೆ. ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ. ಪರಿಸರ ನಾಶದಿಂದ ಜಲಮಾಲಿನ್ಯ, ವಾಯುಮಾಲಿನ್ಯ ಉಂಟಾಗುತ್ತಿದೆ. ಮುಂದಿನ ಪೀಳಿಗೆಯ ಉಪಯೋಗಕ್ಕಾಗಿ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಟಿ.ಮಂಜುನಾಥ್, ನಂದಿನಿ ಆಲಂದೂರು, ಅನುಷಾ, ಅರವಿಂದ್ ,ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net