ಹ್ಯೂಮನ್ ಕಂಪ್ಯೂಟರ್ ಜತೆ ವಿದ್ಯಾರ್ಥಿಗಳ ಸಂವಾದ

IMG_20230726_212530_405-1.jpg
Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಡಾ. ಆರ್.ಬಿ. ಪಾಟೀಲ್ ಮಹೇಶ ಪ.ಪೂ. ವಿಜ್ಞಾನ ಮಹಾವಿದ್ಯಾಲಯಕ್ಕೆ ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರು ಗಳಿಸಿರುವ ಅಥಣಿಯ ಬಸವರಾಜ ಶಂಕರ ಉಮರಾಣಿ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಹುಟ್ಟಿನಿಂದಲೇ ಕುರುಡನಾದ ಬಸವರಾಜ ಬಾಹ್ಯ ಪ್ರಪಂಚ ನೋಡಲಿಲ್ಲ. ಅವರ ಮನಸ್ಸು ಯಾವುದೇ ಸಾಮಾನ್ಯ ವ್ಯಕ್ತಿಗೆ ಗ್ರಹಿಸಲಾಗದ ವಿಷಯವನ್ನು ನೋಡುತ್ತದೆ ಮತ್ತು ಅರ್ಥೈಸುತ್ತದೆ. ಜ್ಞಾನವು ಜಗತ್ತನ್ನು ಬದಲಾಯಿಸಬಲ್ಲದು ಎಂಬುದುಕ್ಕೆ ಅವರು ಉತ್ತಮ ನಿದರ್ಶನ.

ಅವರು ವಿದ್ಯಾಥಿರ್ಗಳಿಗೆ ತ್ವರಿತವಾಗಿ 30 ಸ್ಥಾನಗಳ ಗಣಿತದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರದ ಲೆಕ್ಕಗಳನ್ನು ಮಾಡಿ ಅಚ್ಚರಿ ಮೂಡಿಸಿದರು. ಹಲವರಿಗೆ ಕೇವಲ ಜನ್ಮ ದಿನಾಂಕ ಕೇಳಿ ಆ ದಿನ ಯಾವ ವಾರ ಎಂದು ಕೂಡಲೇ ತಿಳಿಸಿದರು.

ಅಧ್ಯತೆ ವಹಿಸಿದ್ದ ಪ್ರಾಚಾರ್ಯ ರಾಮಮೋಹನ ಎಚ್.ಕೆ. ಮಾತನಾಡಿ, ಇಂತಹ ಗಣಿತ ಮಾಂತ್ರಿಕರ ಅಸಾಧಾರಣ ವಿಶ್ಲೇಷಣಾತ್ಮಕ ಕೌಶಲ ಮತ್ತು ಸ್ಮರಣ ಶಕ್ತಿ ಎಲ್ಲರಿಗೂ ಸ್ಫೂತಿರ್ದಾಯಕ. ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಯಿತು ಎಂದು ಹೇಳಿದರು.

ಉಪಪ್ರಾಚಾರ್ಯ ರಮೇಶ ಹೊಂಬಾಳೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಐ.ಎಸ್. ಹಿರೇಮಠ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net