

ಹಾವೇರಿ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ಜಾಗೃತಿ ಜಾಥಾ ನಡೆಸಿದರು.
ನಗರದ ಜೆಎಚ್ ಪಟೇಲ್ ವೃತ್ತ, ಗಾಂಧಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಜಾಥಾದಲ್ಲಿ ಪಾಲ್ಗೊಂಡಿದ್ದರು. ಅಮೃತ ಮಹೋತ್ಸವ ಜಾಥಾಗೆ ಪದವಿ ಪ್ರಾಚಾರ್ಯು ಡಾ. ಸಂಧ್ಯಾ ಕುಲಕರ್ಣಿ ಧ್ವಜ ವಿತರಣೆ ಮೂಲಕ ಚಾಲನೆ ನೀಡಿದರು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ವಿುಸಿ ಗಮನ ಸೆಳೆದರು.
ಪಪೂ ಪ್ರಾಚಾರ್ಯ ಜೆ.ಆರ್. ಸಿಂಧೆ ಮಾತನಾಡಿ, ಸ್ವಾತಂತ್ರ್ಯ 75ನೇ ವರ್ಷವನ್ನು ಸಂಭ್ರಮಿಸುತ್ತಿದ್ದು, ಈ ಸಂದರ್ಭದಲ್ಲಿ ಸ್ವಾತಂತ್ರ್ಯ್ಕಾಗಿ ದುಡಿದ ಸ್ಥಳೀಯ ಹೋರಾಟಗಾರರನ್ನು ಸ್ಮರಿಸುವ ಮತ್ತು ಗೌರವಿಸುವ ಪುಣ್ಯ ಘಳಿಗೆ ಇದೀಗ ಒದಗಿಬಂದಿದೆ. ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನ, ಔದಾರ್ಯಗಳಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಆದೇಶದಂತೆ ಪ್ರತಿಯೊಬ್ಬ ದೇಶವಾಸಿಯೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಆರೋಹಣ ಮಾಡುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದರು.
ಎಂ.ಎಸ್. ಬೆಂಡಿಗೇರಿ, ಎಸ್.ಜಿ. ಹುಣಸಿಕಟ್ಟಿಮಠ ಹಾಗೂ ಎನ್.ಎ. ಗಾಣಿಗ ನಿರ್ವಹಿಸಿದರು.